ಎರ್ನಾಕುಳಂ: ಪೋರ್ಟ್ ಕೊಚ್ಚಿ ಆರ್.ಡಿ.ಒ.ಗೆ ಹೈಕೋರ್ಟ್ 10,000 ರೂ. ದಂಡ ವಿಧಿಸಿದೆ. ನ್ಯಾಯಾಲಯದ ಆದೇಶ ಪಾಲಿಸದ ಆರ್‍ಡಿಒಗೆ ದಂಡ ವಿಧಿಸಲಾಗಿದೆ.
ಅಡ್ವಕೇಟ್.ಜನರಲ್ ಕಚೇರಿಯ ಮನವಿಯ ಹೊರತಾಗಿಯೂ ಮಾಹಿತಿ ಹಸ್ತಾಂತರಿಸದ ಕಾರಣ ಹೈಕೋರ್ಟ್ ಕ್ರಮ ಕೈಗೊಳ್ಳಬೇಕಾಯಿತು.
ಈ ಹಿಂದೆ ಭೂ ಮರು ವಿಂಗಡಣೆ ಅರ್ಜಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶ ನೀಡಿ ವರ್ಷ ಕಳೆದರೂ ಆರ್‍ಡಿಒ ಜಾರಿ ಮಾಡಿರಲಿಲ್ಲ. ಇದರಿಂದಾಗಿ ನ್ಯಾಯಾಲಯ ಆರ್.ಡಿ.ಒ.ಗೆ ದಂಡ ವಿಧಿಸಿದೆ.