ಕಾಸರಗೋಡು :ಜಿಲ್ಲಾಡಳಿತ ವತಿಯಿಂದ ಗಾಂಧಿ ಜಯಂತಿ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದರ ಅವರು, ಮಹಾತ್ಮಾ ಗಾಂಧಿ ಆದರ್ಶ ವಿಶ್ವವಂದ್ಯವಾಗಿದ್ದು, ಅಹಿಂಸಾಧರ್ಮ ಎತ್ತಿಹಿಡಿದ ಮಹನೀಯರ ಆದರ್ಶ ಪಾಲನೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಗಬೇಕು ಎಂದು ತಿಳಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಶುಚೀಕರಣ ಕಾರ್ಯ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.