ತಿರುವನಂತಪುರಂ: ತನ್ನ ಪ್ರಿಯಕರನಿಗೆ ವಿಷಪ್ರಾಶನ ನೀಡಿದ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾ ವಿಚಾರಣಾ ನ್ಯಾಯಾಲಯವನ್ನು ಬದಲಾಯಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ. ವಿಚಾರಣೆಯನ್ನು ತಮಿಳುನಾಡಿಗೆ ವರ್ಗಾಯಿಸಬೇಕು ಎಂಬುದು ಆಗ್ರಹಿಸಲಾಗಿದೆ.
ಕನ್ಯಾಕುಮಾರಿಯಲ್ಲಿರುವ ಜೆಎಂಎಫ್ ಸಿಯನ್ನು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂಬುದು ಅರ್ಜಿಯಲ್ಲಿ ಕೇಳಲಾಗಿದೆ. ತಮಿಳುನಾಡಿನಲ್ಲಿ ಅಪರಾಧ ನಡೆದಿರುವುದರಿಂದ ಆ ರಾಜ್ಯದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ವಕೀಲ ಶ್ರೀರಾಮ್ ಪರಕ್ಕತ್ ಅವರು ಅರ್ಜಿ ಸಲ್ಲಿಸಿರುವರು. ಗ್ರೀಷ್ಮಾ ಜೊತೆಗೆ ಪ್ರಕರಣದ ಇತರ ಆರೋಪಿಗಳೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆರೋಪಿಯ ತವರು ಕನ್ಯಾಕುಮಾರಿ ಜಿಲ್ಲೆಯ ಪೂಂಬಳ್ಳಿಕೋಣಂ ಎಂಬಲ್ಲಿದೆ.
ಪ್ರಸ್ತುತ, ಪ್ರಕರಣದ ವಿಚಾರಣೆಯು ನೆಯ್ಯಾಟಿಂಗರ ಹೆಚ್ಚುವರಿ ಸೆಕ್ಷನ್ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ. ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಕೇರಳದಲ್ಲಿ ವಿಚಾರಣೆ ನಡೆಸುವುದು ಆರೋಪಿಗಳ ನ್ಯಾಯಕ್ಕೆ ಅಡ್ಡಿಯಾಗುತ್ತದೆ ಎನ್ನಲಾಗಿದೆ.
2022 ರ ಅಕ್ಟೋಬರ್ 14 ರಂದು ತಮಿಳುನಾಡಿನ ಪಲುಕಲ್‍ನಲ್ಲಿರುವ ತನ್ನ ಮನೆಯಲ್ಲಿ ಗ್ರೀಷ್ಮಾ ಶರೋನ್‍ಗೆ ವಿಷ ಬೆರೆಸಿ ಕೊಲೆಗೈದಿದ್ದಳು ಎಂದು ಪೋಲೀಸರು ಕಂಡುಕೊಂಡಿದ್ದಾರೆ. ಇದು ಸಾಮಾನ್ಯ ಸಾವು ಎಂಬುದು ಪ್ರಾಥಮಿಕ ತೀರ್ಮಾನವಾಗಿತ್ತು. ಶರೋನ್ ಕುಟುಂಬದವರ ಮನವಿ ಬಳಿಕ ವಿಶೇಷ ತಂಡ ನಡೆಸಿದ ತನಿಖೆಯಲ್ಲಿ ಇದೊಂದು ಕೊಲೆ ಎಂಬುದು ಸ್ಪಷ್ಟವಾಯಿತು.