ಕಣ್ಣೂರು: ಯುದ್ಧಭೂಮಿಯಲ್ಲಿ ಇಸ್ರೇಲ್ ಪಡೆಗಳು ಧರಿಸುವ ಸಮವಸ್ತ್ರವನ್ನು ಕಣ್ಣೂರಿನಿಂದ ಹೊಲಿಯಲಾಗುತ್ತದೆ ಎಂಬುದು ಬಹುಮಂದಿಗೂ ಗೊತ್ತಿರಲಾರದು. ಫಿಲಿಪೈನ್ ಆರ್ಮಿ ಮತ್ತು ಕತಾರ್ ಏರ್ ಪೋರ್ಸ್‍ನಂತಹ ವಿವಿಧ ಪಡೆಗಳಿಗೆ ಸಮವಸ್ತ್ರವನ್ನು ಕಣ್ಣೂರಲ್ಲಿ ತಯಾರಿಸಲಾಗುತ್ತದೆ.
ಯುದ್ಧದ ಸಮವಸ್ತ್ರಗಳನ್ನು ಕಣ್ಣೂರು ಕೂತುಪರಂಬದ ಮರಿಯನ್ ಅಪರೆಲ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ತಯಾರಿಸಲಾಗುತ್ತದೆ.
ವಿವಿಧ ದೇಶಗಳ ಸೇನೆಗೆ ಬೇಕಾಗುವ ವಿಶೇಷ ಕಪ್ಪು ಬಣ್ಣದ ಸಮವಸ್ತ್ರ, ಜೈಲು ವಾರ್ಡರ್ ಗಳ ಸಮವಸ್ತ್ರಗಳನ್ನು ಹೊಲಿಯುವುದು ಇಲ್ಲಿಂದಲೇ. ಇಲ್ಲಿ ಕೆಲಸ ಮಾಡುತ್ತಿರುವ 1,500 ಉದ್ಯೋಗಿಗಳಲ್ಲಿ ಬಹುಪಾಲು ಮಹಿಳೆಯರು. ಸಮೀಪದ ಪ್ರದೇಶದ ಮಹಿಳೆಯರಿಗೆ ಸಮವಸ್ತ್ರ ಹೊಲಿಯಲು ಅಗತ್ಯ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ. ಅವರು ಇನ್ನೂ 1,000 ಕಾರ್ಮಿಕರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಕಟ್ಟಡವನ್ನು ವಿಸ್ತರಿಸಲು ಸಹಾಯಕ್ಕಾಗಿ ಸರ್ಕಾರವನ್ನು ಕೇಳಿದ್ದಾರೆ ಎಂದು ಅವರು ಹೇಳಿರುವರು.