ನವದೆಹಲಿ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ 'ಐಐಟಿ- ಮದ್ರಾಸ್' ನವೆಂಬರ್‌ನಲ್ಲಿ ತನ್ನ ಮೊದಲ ಸಾಗರೋತ್ತರ ಕ್ಯಾಂಪಸ್ ಅನ್ನು ಪೂರ್ವ ಆಫ್ರಿಕಾದ ತಾಂಜೇನಿಯಾದ ಜಾಂಜಿಬಾರ್‌ನಲ್ಲಿ ಹೊಂದಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ.

ಭಾರತದ ಉನ್ನತ ಕೌಶಲ ಅಭಿವೃದ್ಧಿ ಸಂಸ್ಥೆಗಳು ತಾಂಜೇನಿಯಾ ಸೇರಿದಂತೆ ಆಫ್ರಿಕಾದ ಇತರ ದೇಶಗಳಲ್ಲಿ ತನ್ನ ಕ್ಯಾಂಪಸ್‌ಗಳನ್ನು ತೆರೆಯುವುದನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತದೆ ಎಂದ ಅವರು, ಈ ಸಂಬಂಧ ತಾನು ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
'ಐಐಟಿ-ಮದ್ರಾಸ್'ನ ಕ್ಯಾಂಪಸ್ ಸಂಬಂಧ ಭಾರತ ಮತ್ತು ತಾಂಜೇನಿಯಾ ಜತೆ ಜುಲೈನಲ್ಲಿ ಒಡಂಬಡಿಕೆ ಏರ್ಪಟ್ಟಿತ್ತು. ತಾಂಜೇನಿಯಾ ಕ್ಯಾಂಪಸ್‌ನಲ್ಲಿ ಸಂಸ್ಥೆಯು ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ವಿಷಯದಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ ಮತ್ತು ಎರಡು ವರ್ಷದ ಎಂ.ಟೆಕ್ ಕೋರ್ಸ್‌ಗಳನ್ನು ನಡೆಸಲಿದೆ.