ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ಕಾಸರಗೋಡು ಪೂರ್ವ ಘಟಕದ ವಾರ್ಷಿಕ ಸಮ್ಮೇಳನ ಎಕೆಆರ್‍ಆರ್‍ಡಿಎ ಭವನದಲ್ಲಿ ಜರುಗಿತು. ಘಟಕದ ಅಧ್ಯಕ್ಷ ಸುರೇಶ್ ಚಂದ್ರಬೀಜೆ ಧ್ವಜಾರೋಹಣ ನಡೆಇದರು. ಈ ಸಂದರ್ಭ ಆಯೋಜಿಸಲಾದ ಒಂದು ವರ್ಷದಿಂದ ನಡೆದ ಚಟುವಟಿಕೆಗಳ ಛಾಯಾಚಿತ್ರ ಪ್ರದರ್ಶನವನ್ನು ಎಕೆಪಿಎ ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಉದ್ಘಾಟಿಸಿದರು.
ಕಾಸರಗೋಡು ಪ್ರಾದೇಶಿಕ ಸಮಿತಿ ಅಧ್ಯಕ್ಷ ವಾಸು ಎ. ಸಮ್ಮೇಳನ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಸುರೇಶ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಪ್ರಾದೇಶಿಕ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಘಟಕದ ಕಾರ್ಯದರ್ಶಿ ವಾಮನ್ ಕುಮಾರ್ ವರದಿ, ಅಜಿತ್ ಲೆಕ್ಕಪತ್ರ, ಘಟಕದ ಉಪಾಧ್ಯಕ್ಷ ಮಣಿ ಐ ಫೆÇೀಕಸ್ ಸಂತಾಪ ಠರಾವು ಮಂಡಿಸಿದರು. ಎಕೆಪಿಎ ರಾಜ್ಯ ಸಮಿತಿ ಸದಸ್ಯ ಹರೀಶ್ ಪಾಲಕುನ್ನು, ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ, ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ, ಜಿಲ್ಲಾ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಪ್ರಭಾರಿ ವಿಜಯನ್ ಶೃಂಗಾರ್, ಜಿಲ್ಲಾ ಉಪಾಧ್ಯಕ್ಷ ಶರೀಫ್ ಫ್ರೇಮ್ ಆರ್ಟ್, ಜಿಲ್ಲಾ ಪಿಆರ್‍ಓ ಗೋವಿಂದನ್ ಶಂಕರನ್‍ಕಾಟ್, ಜಿಲ್ಲಾ ಸಮೂಹ ವಿಮಾ ಸಂಯೋಜಕ ಅಶೋಕನ್ ಪೆÇಯಿನಾಚಿ, ಜಿಲ್ಲಾ ನ್ಯಾಚುರಲ್ ಕಪ್ ಸಂಯೋಜಕ ದಿನೇಶ್ ಇನ್‍ಸೈಟ್, ಜಿಲ್ಲಾ ಕಲ್ಯಾಣ ಸಂಚಾಲಕ ಸಂಜೀವ ರೈ ಹಾಗೂ ಪ್ರಾಂತ ಕೋಶಾಧಿಕಾರಿ ರೇಖಾ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಸುಜಿತ್ ಸ್ವಾಗತಿಸಿದರು. ರಾಜೇಂದ್ರನ್ ವಂದಿಸಿದರು.
2022 ರ ಸಮ್ಮೇಳನದಲ್ಲಿ ವಿವಿಧ ಛಾಯಾಗ್ರಹಣ ಸ್ಪರ್ಧೆಗಳಲ್ಲಿ 23 ವಿಜೇತರು, ಈಸ್ಟ್ ಯುನಿಟ್ ಬ್ಲಡ್ ಡೋನರ್ಸ್ ಕ್ಲಬ್ ನೇತೃತ್ವದಲ್ಲಿ ಈ ವರ್ಷ ನಡೆದ ವಿವಿಧ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಿದ 30 ಕ್ಕೂ ಹೆಚ್ಚು ಸದಸ್ಯರನ್ನು ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಜಿತ್ ಕುಮಾರ್ ಎ.ವಿ ಅಧ್ಯಕ್ಷ, ಶಬರಿ ಇನ್‍ಸೈಟ್ ಉಪಾಧ್ಯಕ್ಷ, ಸುಜಿತ್ ಇನ್ಫೋಕಸ್ ಕಾರ್ಯದರ್ಶಿ, ಸುನಿಲ್ ಕುಮಾರ್ ಎಂ ಜತೆ ಕಾರ್ಯದರ್ಶಿ ಮಣಿ ಕೋಶಾಧಿಕಾರಿ, ಮನೀಶ್ ಘಟಕ ಪಿಆರ್‍ಒ, ಪ್ರಾದೇಶಿಕ ಸಮಿತಿ ಸದಸ್ಯರಾಗಿ ದಿನೇಶ್ ಇನ್‍ಸೈಟ್, ರಾಜೇಂದ್ರನ್, ಸುನೀಲ್‍ಕುಮಾರ್ ಪಿಟಿ, ವಾಮನ್ ಕುಮಾರ್, ಸುರೇಶ್ ಚಂದ್ರ ಬಿಜೆ, ಸಂಜೀವ ರೈ ಮತ್ತು ರಾಜೇಶ್ ಕೆ. ಅವರನ್ನು ಆಐಕೆ ಮಾಡಲಾಯಿತು.