ತಿರುವನಂತಪುರಂ: ರಾಜ್ಯಾದ್ಯಂತ ಇದೇ ತಿಂಗಳ ೩೧ರಂದು ಸಾಂಕೇತಿಕ ಮುಷ್ಕರ ನಡೆಸುವುದಾಗಿ ಬಸ್ ಮಾಲೀಕರು ಘೋಷಿಸಿದ್ದಾರೆ. ವಿವಿಧ ಬೇಡಿಕೆ ಮುಂದಿರಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸಾಮಾನ್ಯ ಶುಲ್ಕ ಮತ್ತುವಿದ್ಯಾರ್ಥಿ ರಿಯಾಯಿತಿಗಳನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ದೂರದ ಮಿತಿ ನಿಗದಿ ಮಾಡದೆ ಪರವಾನಿಗೆ ನೀಡುವಂತೆಯೂ ಬಸ್ ಮಾಲೀಕರು ಆಗ್ರಹಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ನವೆಂಬರ್ ೨೧ ರಿಂದ ಅನರ‍್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಸ್ ಮಾಲೀಕರು ತಿಳಿಸಿದ್ದಾರೆ. ಪ್ರಯಾಣ ದರ ಏರಿಕೆಯಲ್ಲಿ ಬದಲಾವಣೆ ಹಾಗೂ ಬಸ್‌ಗಳಲ್ಲಿ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಕಡ್ಡಾಯಗೊಳಿಸುವ ನರ‍್ಧಾರಕ್ಕೆ ಒತ್ತಾಯಿಸಿದ್ದಾರೆ.