ಕಾಸರಗೋಡು : ಜಿಲ್ಲೆಯ ಉದುಮ ಮಂಡಲದಲ್ಲಿ ನವೀಕೃತ ಮೌವ್ವಲ್ ಕಲ್ಲಿಂಗಾಲ್ ರಸ್ತೆಯನ್ನು ರಾಜ್ಯ ಬಂದರು ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಖಾತೆ ಸಚಿವ ಅಹ್ಮದ್ ದೇವರಕೋವಿಲ್ ಉದ್ಘಾಟಿಸಿದರು.
ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಸ್ನಿನ್ ವಹಾಬ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸೂರಜ್ ಪಳ್ಳಿಪುಳ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಗೀತಾ, ಮೌವ್ವಲ್ ಕುಞಬ್ದುಲ್ಲ, ವಿ.ಕೆ.ಅನಿತಾ, ಟಿ.ವಿ.ರಾಧಿಕಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಟಿ.ಸಿ.ಸುರೇಶ್, ಪಿ.ಎ.ಇಬ್ರಾಹಿಂ ಪಳ್ಳಿಪುಳ, ಗಂಗಾಧರನ್ ಪೆÇಡಿಪಳ್ಳ, ಪಳ್ಳಿಕ್ಕರ ಗ್ರಾಹಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ಉಪಸ್ಥಿತರಿದ್ದರು. ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಸ್ವಾಗತಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 3 ಕೋಟಿ 45 ಲಕ್ಷ ರೂ. ವೆಚ್ಚದಲ್ಲಿ ಮೌವ್ವಲ್ ಕಲ್ಲಿಂಗಲ್ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಮೌವ್ವಲ್ ಕಲ್ಲಿಂಗಲ್ ರಸ್ತೆಯು ಪಳ್ಳಿಕ್ಕರ ಪೆರಿಯ ಲೋಕೋಪಯೋಗಿ ರಸ್ತೆ ಮತ್ತು ಕಾಞಂಗಾಡ್ ಕಾಸರಗೋಡು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯಾಗಿದೆ.