ಗುವಾಹಟಿ: ವಂಶಪಾರಂಪರ್ಯ ರಾಜಕೀಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ ನಡೆಸಿದ್ದು, ಅವರು ರಾಜಕೀಯದ ಬಗ್ಗೆ ಯಾವುದೇ ಜ್ಞಾನವಿಲ್ಲದ 'ಅನಕ್ಷರಸ್ಥ ಮಗು' ಎಂದು ಟೀಕಿಸಿದ್ದಾರೆ.

ಮಿಜೋರಾಂನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐನಲ್ಲಿ ಹೊಂದಿರುವ ಸ್ಥಾನ ಕುರಿತು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು.
'ಶಾ ಅವರ ಮಗ ಬಿಜೆಪಿಯಲ್ಲಿಲ್ಲ. ಆದರೆ, ರಾಹುಲ್ ಅವರ ತಾಯಿ, ತಂದೆ, ಅಜ್ಜ, ಸಹೋದರಿ, ಸಹೋದರ ಎಲ್ಲರೂ ರಾಜಕೀಯದಲ್ಲಿದ್ದು, ಪಕ್ಷ ನಿಯಂತ್ರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಜೆಪಿಯ ಒಂದು ವಿಭಾಗ ಎಂದು ರಾಹುಲ್ ಭಾವಿಸಿದ್ದಾರೆ. ಅವರ ಬಗ್ಗೆ ನನ್ನನ್ನು ಹೆಚ್ಚು ಕೇಳಬೇಡಿ' ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
'ಉತ್ತರಪ್ರದೇಶದಲ್ಲಿ ಶಾಸಕರಾಗಿರುವ ರಾಜನಾಥ್ ಸಿಂಗ್ ಅವರ ಮಗನನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಹೋಲಿಸಬಹುದೇ? ಅವರು ಬಿಜೆಪಿಯನ್ನು ನಿಯಂತ್ರಿಸುತ್ತಾರೆಯೇ?. ರಾಹುಲ್ ಮೊದಲು ಹೊಸಬರಿಗೆ ಅವಕಾಶ ನೀಡಬೇಕು. ನಂತರ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಮಾತನಾಡಬೇಕು ಎಂದು ತಿರುಗೇಟು ನೀಡಿದರು.