ಕಾಸರಗೋಡು : ಗಾಂಧಿ ಜಯಂತಿಯ ಅಂಗವಾಗಿ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದನ್ವಯ ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಣ್ಣೂರು ಯೋಜನಾ ಅನುಷ್ಠಾನ ಘಟಕ ಜಂಟಿಯಾಗಿ ಕಾಸರಗೋಡು ಬಸ್ ನಿಲ್ದಾಣ ಹಾಗೂ ಕುಂಬಳೆ ರೈಲು ನಿಲ್ದಾಣಗಳಲ್ಲಿ ಶುಚೀಕರಣ ಕಾರ್ಯ ಆಯೋಜಿಸಲಾಯಿತು.
ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ತಲಪ್ಪಾಡಿ-ಚೆಂಗಳ ರೀಚ್ ನಿರ್ಮಾಣ ಕಾರ್ಯ ನಡೆಸುತ್ತಿರುವ ಉರಾಳುಂಗಲ್ ಸೊಸೈಟಿಯ ಸುಮಾರು 100 ಮಂದಿ ಸ್ವಯಂಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ತಲಪ್ಪಾಡಿ-ಚೆಂಗಳ ರೀಚ್‍ನ ಹಿರಿಯ ಯೋಜನಾ ವ್ಯವಸ್ಥಾಪಕ ಎಂ. ನಾರಾಯಣನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ವತಂತ್ರ ಇಂಜಿನಿಯರಿಂಗ್ ವಿಭಾಗದ ಶೈಲೇಶ್ ಕುಮಾರ್ ಸಿಂಹ, ಶಂಕರ್ ಗಣೇಶ್, ಬ್ರಿಜ್ ಮೋಹನ್, ಅಖಿಲೇಶ್ ಯಾದವ್ ಮತ್ತಿತರರು ಶುಚೀಕರಣ ಕಾರ್ಯದ ನೇತೃತ್ವ ವಹಿಸಿದ್ದರು. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿಯೂ ಊರಾಳುಂಗಲ್ ಸೊಸ್ಟೈಟಿ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.