ಇತ್ತೀಚೆಗೆ ಏಕೋ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ. ತುಂಬಾ ಬೇಸರದಿಂದ ಇದ್ದಂತೆ ಕಾಣುತ್ತಾರೆ, ನೀವು ಏನಾದರೂ ಮಾತನಾಡಿದರೆ ಸಿಡುಕುತ್ತಾರೆ, ಚಿಕ್ಕ ವಿಷಯಕ್ಕೆ ಕಿರುಚಾಡಿ ದೊಡ್ಡ ರಂಪ ಮಾಡುತ್ತಾರೆ. ಕಾರಣವಿಲ್ಲದೆ ಅಳುತ್ತಾರೆ, ಯಾರ ಜೊತೆ ಬೆರೆಯುತ್ತಿಲ್ಲ ಈ ರೀತಿ ಸ್ವಭಾವದಲ್ಲಿ ತುಂಬಾ ಬದಲಾವಣೆ ಕಂಡು ಬಂದಾಗ ಅವರು ಏಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸಿಟ್ಟಾಗಬೇಡಿ, ಈ ಸಮಯದಲ್ಲಿ ಅವರಿಗೆ ನಿಮ್ಮ ಅವಶ್ಯಕತೆ ತುಂಬಾನೇ ಇರುತ್ತದೆ, ಏಕೆಂದರೆ ಅವರು ಖಿನ್ನತೆಯಿಂದ ಬಳಲುತ್ತಿರಬಹುದು. ಅವರ ವರ್ತನೆ ನಿಮಗೆ ಕಿರಿಕಿರಿ ಆಯ್ತೆಂದು ನೀವು ಅವರನ್ನು ನಿರ್ಲಕ್ಷ್ಯ ಮಾಡಿದರೆ ಅವರು ಅವರು ಖಿನ್ನತೆಗೆ ಜಾರುವ ಸಾಧ್ಯತೆ ಹೆಚ್ಚುವುದು.
ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ಈ ಪ್ರಯತ್ನ ಮಾಡಿದರೆ ಅವರನ್ನು ಖಿನ್ನತೆಯಿಂದ ಹೊರತರಬಹುದು, ನೀವಿಬ್ಬರು ಖುಷಿಯ ಜೀವನ ನಡೆಸಬಹುದು:
ಮೊದಲಿಗೆ ಖಿನ್ನತೆಯ ಬಗ್ಗೆ ತಿಳಿದುಕೊಳ್ಳಿ'
ಕೆಲವೊಮ್ಮೆ ಯಾವ ಕಾರಣದಿಂದ ಅವರು ಖಿನ್ನತೆಗೆ ಜಾರಿದ್ದಾರೆ ಎಂಬುವುದು ನಿಮಗೆ ತಿಳಿದಿರುತ್ತದೆ, ಇನ್ನು ಕೆಲವೊಮ್ಮೆ ನಿಖರ ಕಾರ್ಣ ನಿಮಗೆ ತಿಳಿದಿರುವುದಿಲ್ಲ, ಅವರು ಹೇಳಿರುವುದೂ ಇಲ್ಲಆದರೆ ಅವರು ಖಿನ್ನತೆಯಿಂದಲೇ ಬಳಲುತ್ತಿದ್ದಾರೆ ಎಂಬುವುದನ್ನು ಈ ಲಕ್ಷಣಗಳ ಮೂಲಕ ಕಂಡು ಹಿಡಿಯಬಹುದು
* ತುಂಬಾ ಬೇಸರದಿಂದ ಇರುವುದು, ಭರವಸೆ ಕಳೆದುಕೊಳ್ಳುವುದು
* ಹೊಟ್ಟೆ ಹಸಿವು ಇಲ್ಲದಿರುವುದು ಅಥವಾ ತುಂಬಾನೇ ತಿನ್ನುವುದು
* ನಿದ್ದೆ ಸರಿಯಾಗಿ ಮಾಡದಿರುವುದು
* ತಲೆಸುತ್ತು
* ಉದ್ವೇಗ
* ಅನಾವಶ್ಯಕವಾಗಿ ಕೋಪಗೊಳ್ಳುವುದು
* ಒಂದು ನಿರ್ಧಾರ ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗದಿರುವುದು
* ಸಾವಿನ ಬಗ್ಗೆ ಮಾತನಾಡುವುದು
* ದೈಹಿಕವಾಗಿ ಕೆಲವು ಬದಲಾವಣೆ ಕಂಡು ಬರುವುದು
ಅವರಿಗೆ ಬೆಂಬಲ ನೀಡಿ
ಅವರಿಗೆ ಈ ಸಮಯದಲ್ಲಿ ನಾನು ಒಂಟಿ ಎಂದು ಅನಿಸುತ್ತಿರುತ್ತದೆ, ನೀವು ಅವರಿಗೆ ಬೆಂಬಲ ನೀಡಿ. ನಿಮಗೆ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಾಗದಿರಬಹುದು, ಆದರೆ ಅವರ ಮಾತನ್ನು ಕೇಳಿ
* ಏನಾಯ್ತು, ನನ್ನ ಹತ್ರ ಹೇಳಿ
* ನನ್ನ ಜೀವನದಲ್ಲಿ ನೀವೇ ಎಲ್ಲ, ಏನೇ ಬರಲಿ ಜೊತೆಯಾಗಿ ಎದುರಿಸೋಣ
ಎಂಥದ್ದೇ ಪರಿಸ್ಥಿತಿ ಇರಲಿ ನಿಮ್ಮ ಜೊತೆ ಸದಾ ನಾನು ಇರುತ್ತೇನೆ ಎಂದು ಅವರಿಗೆ ಭರವಸೆ ನೀಡಿ.
* ಚಿಕಿತ್ಸೆಗೆ ಕರೆದುಕೊಂಡು ಹೋಗಿ
ಅವರು ಚಿಕಿತ್ಸೆಗೆ ಬರಲು ಒಪ್ಪುವುದಿಲ್ಲ, ಆದರೆ ನೀವು ಮನವೊಲಿಸಿ, ಅವರಿಗೆ ಈ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗಿರುವುದು ಅನಿವಾರ್ಯ.
* ಅವರ ಜೊತೆ ಮಾತನಾಡಿ, ಅವರ ಔಷಧಗಳನ್ನು ಸರಿಯಾದ ಸಮಯಕ್ಕೆ ನೀಡಿ.
ಮನೆಯ ವಾತಾವರಣ ಲವಲವಿಕೆಯಿಂದ ಕೂಡಿರಲಿ
* ಮನೆಯ ವಾತಾವರಣವನ್ನು ಖುಷಿಯಿಂದ ಇಡಿ, ಅವರು ಬೇಸರದಲ್ಲಿದ್ದಾಗ ನೀವು ಬೇಸರದಿಂದ ಇರಬೇಡಿ, ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳಿ
* ವ್ಯಾಯಾಮ ಮಾಡಿಸಿ
* ಅವರಿಗೆ ಆರೋಗ್ಯಕರ ಆಹಾರ ನೀಡಿ
* ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ.
* ಜೊತೆಯಾಗಿ ಭವಿಷ್ಯದ ಪ್ಲ್ಯಾನ್ ಮಾಡಿ
* ಅವರ ಜೊತೆ ಇರುವವರಿಗೂ ಅವರನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳಲು ಹೇಳಿ. ಈ ಸಮಯದಲ್ಲಿ ಅವರ ಸ್ನೇಹಿತರ ಸಹಾಯ ಮಾಡಿ. ಎಷ್ಟೋ ಬಾರಿ ನಿಮ್ಮ ಬಳಿ ಹಂಚಿಕೊಳ್ಳದ ವಿಷಯ ಅವರ ಬಳಿ ಹಂಚಿಕೊಂಡು ಮನಸ್ಸು ಹಗುರ ಮಾಡಬಹುದು.
ಇವೆಲ್ಲಾ ಆತ್ಮಹತ್ಯೆಯ ಸೂಚನೆಗಳು, ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ
* ಆತ್ಮಹತ್ಯೆಯ ಮಾತು ಬರುವುದು
* ಆತ್ಮಹತ್ಯೆಗೆ ಯತ್ನಿಸುವುದು
* ಸಾಮಾಜಿಕವಾಗಿ ಬೆರೆಯದೆ ಇರುವುದು
* ಅವರ ದಿನಚರಿಯಲ್ಲಿ ಬದಲಾವಣೆ ಕಂಡು ಬರುವುದು
* ಅತಿಯಾಗಿ ಕುಡಿಯುವುದು ಅಥವಾ ಸ್ವನಾಶದ ಮಾರ್ಗ ಅನುಸರಿಸುವುದು
* ತನ್ನ ವಸ್ತುಗಳ ಕಡೆ ಗಮನಹರಿಸದಿರುವುದು
* ನಾನು ಇಲ್ಲದಿದ್ದಾಗ ಏನಾಗಬೇಕೆಂಬ ಸಿದ್ಧತೆ ಮಾಡಿಕೊಳ್ಳುವುದು
ಅವರಲ್ಲಿನ ಖಿನ್ನತೆ ಹೋಗಲಾಡಿಸುವುದು ಹೇಗೆ? * ಚಿಕಿತ್ಸೆಯ ಜೊತೆಗೆ ಅವರ ಮಾತುಗಳನ್ನು ಕೇಳಿ * ಅವರ ಮಾತಿಗೆ ವಿರುದ್ಧವಾಗಿ ಏನನ್ನೂ ಹೇಳಲು ಹೋಗಬೇಡಿ * ಅವರನ್ನು ಸಮಧಾನ ಪಡಿಸಿ * ಅವರ ಜೊತೆ ಸದಾ ನೀವು ಇರುತ್ತೀರಿ ಎಂಬ ಬೆಂಬಲ ನೀಡಿ * ಅವರ ಜೊತೆ ಪ್ರೀತಿಯಿಂದ ವರ್ತಿಸಿ * ಅವರನ್ನು ಮೊದಲಿಗಿಂತಲೂ ಹೆಚ್ಚಾಗಿ ಆರೈಕೆ ಮಾಡಿ. ಹೀಗೆ ಮಾಡುವುದರಿಂದ ಅವರನ್ನು ಖಿನ್ನತೆಯಿಂದ ಹೊರಬರಲು ಸಹಾರ ಮಾಡಿ.