ನವದೆಹಲಿ: 'ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ' ಇದು ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಭವಿಷ್ಯದ ತಯಾರಿಗಾಗಿ ನೆರೆದಿರುವ ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ಸಂದೇಶ.
ನವದೆಹಲಿ: 'ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ' ಇದು ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಭವಿಷ್ಯದ ತಯಾರಿಗಾಗಿ ನೆರೆದಿರುವ ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ಸಂದೇಶ.
ವರ್ಷದ 2ನೇ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಮಾತನಾಡಿದ ಸಿಂಗ್, ಪ್ರಸ್ತುತ ಮತ್ತು ಹಿಂದೆ ನಡೆದ ಜಾಗತಿಕ ಘಟನೆಗಳಿಂದ ನಾವು ಕಲಿಯಬೇಕು. ಅನಿರೀಕ್ಷಿತವಾಗಿ ನಿರೀಕ್ಷಿಸಿ. ಆ ಮೂಲಕ ಯೋಜನೆ, ಕಾರ್ಯತಂತ್ರ ಮತ್ತು ತಯಾರಿ ನಡೆಸಿ ಎಂದು ಹೇಳಿದರು.
ರಕ್ಷಣಾ ಸಚಿವರು ನಿರ್ದಿಷ್ಟವಾಗಿ ಯಾವುದೇ ದೇಶವನ್ನು ಉಲ್ಲೇಖಿಸದಿದ್ದರೂ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ. ರಷ್ಯಾ-ಉಕ್ರೇನ್ ಘರ್ಷಣೆ ಸದ್ಯದಲ್ಲಿಯೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಯುದ್ಧದ ಸನ್ನದ್ಧತೆ ನಿರಂತರ ವಿದ್ಯಮಾನಗಳಾಗಿರಬೇಕು.
ಯಾವುದೇ ಅನಿರೀಕ್ಷಿತ ಮತ್ತು ಅನಿಶ್ಚಿತತೆಗಳಿಗೆ ನಾವು ಯಾವಾಗಲೂ ಸಿದ್ಧರಾಗಿರಬೇಕು. ಎಲ್ಲಿ ಬೇಕಾದರೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಾವು ಯಾವಾಗಲೂ ನಮ್ಮ ಹೋರಾಟದ ಕೌಶಲ್ಯ ಮತ್ತು ಶಸ್ತ್ರಾಸ್ತ್ರ ತಂತ್ರಜ್ಞಾನಗಳನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಸಂಕೀರ್ಣ ಮತ್ತು ಅನಿಶ್ಚಿತ ಜಾಗತಿಕ ಪರಿಸ್ಥಿತಿ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತಿದೆ. ಅಸಾಂಪ್ರದಾಯಿಕ ಯುದ್ಧವು ಭವಿಷ್ಯದ ಸಾಂಪ್ರದಾಯಿಕ ಯುದ್ಧಗಳ ಭಾಗವಾಗಲಿದೆ ಎಂದು ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಸಂಘರ್ಷಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ ಎಂದರು.
ಸೋಮವಾರ ಆರಂಭವಾದ ಐದು ದಿನಗಳ ಸೇನಾ ಕಮಾಂಡರ್‌ಗಳ ಸಮ್ಮೇಳನವು ಚೀನಾದ ಗಡಿ ಸೇರಿದಂತೆ ಸಂಭಾವ್ಯ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಪರಿಗಣಿಸಿ ಪಡೆಯ ಒಟ್ಟಾರೆ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಿದೆ.