ಮಧೂರು: ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಮೃತ ಉದ್ಯಾನವನ್ನು ರಚಿಸುವ ಗುರಿಯನ್ನು ಹೊಂದಿರುವ ನೆಹರು ಯುವ ಕೇಂದ್ರದ ನೇತೃತ್ವದಲ್ಲಿ ಎರಡನೇ ಹಂತದ ಮೇರಿ ಮೆಟ್ಟಿ ಮೇರ ದೇಶ್ ಕಾರ್ಯಕ್ರಮವು ಪ್ರಗತಿಯಲ್ಲಿದೆ. ಅಭಿಯಾನದ ಅಂಗವಾಗಿ ಮಧೂರು ಪಂಚಾಯತಿಯಲ್ಲಿ ನೆಹರು ಯುವ ಕೇಂದ್ರ ಕಾಸರಗೋಡು ಮತ್ತು ಡಯಟ್ ಮಾಯಿಪ್ಪಾಡಿ ಸಂಯುಕ್ತವಾಗಿ ಅಮೃತ ಕಲಶ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ವಿ.ಮಧುಸೂದನನ್ ಮಾತನಾಡಿದರು. ಡಯಟ್ ಕಾಲೇಜಿನ ಶಿಕ್ಷಕ ಡಾ.ವಿನೋದ್ ಕುಮಾರ್ ಪೆರುಂಬಳ ಸ್ವಾಗತಿಸಿ, ಇ.ವಿ.ನಾರಾಯಣನ್ ವಂದಿಸಿದರು. ಈ ಕಾರ್ಯಕ್ರಮವು ಸ್ವಯಂಸೇವಕರ ಮೂಲಕ ಎಲ್ಲಾ ಗ್ರಾಮಗಳಿಂದ ಮಣ್ಣನ್ನು ಸಂಗ್ರಹಿಸಿ ಅಕ್ಟೋಬರ್‍ನಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪುತ್ತದೆ.