ತಿರುವನಂತಪುರಂ: ಹಮಾಸ್ ಭಯೋತ್ಪಾದಕರು ನಡೆಸಿದ ಹಿಂಸಾಚಾರ ಬೆಂಬಲಿಸಿ ಮತ್ತು ಭಯೋತ್ಪಾದಕ ಚಟುವಟಿಕೆಯನ್ನು ಸ್ವಾತಂತ್ರ್ಯ ಹೋರಾಟ ಎಂದು ಬಿಂಬಿಸಲು ಎಸ್‍ಡಿಪಿಐ ಮುಂದಾಗಿದೆ.
ಪ್ಯಾಲೆಸ್ತೀನ್‍ಗೆ ಬೆಂಬಲ ಸೂಚಿಸಿ ಇಸ್ಲಾಮಿಸ್ಟ್ ಸಂಘಟನೆಯು ಕೇರಳದ ಬೀದಿಗಳಲ್ಲಿ ರ್ಯಾಲಿಗಳನ್ನು ಆಯೋಜಿಸಲು ಯೋಜಿಸುತ್ತಿದೆ. ಅಕ್ಟೋಬರ್ 13 ರ ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಗ್ಗಟ್ಟಿನ ಸಭೆಗಳನ್ನು ಆಯೋಜಿಸುವುದಾಗಿ ಎಸ್‍ಡಿಪಿಐ ಪ್ರಕಟಣೆ ಹೊರಡಿಸಿದೆ.
ಪ್ಯಾಲೆಸ್ತೀನ್ ಜನರು ತಮ್ಮ ತಾಯ್ನಾಡಿನ ವಿಮೋಚನೆಗಾಗಿ ಹೋರಾಡುತ್ತಿದ್ದಾರೆ. ಪ್ಯಾಲೇಸ್ಟಿನಿಯನ್ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸುವ ಮೂಲಕ, ಸ್ಥಳೀಯ ಜನರನ್ನು ಬೇರುಸಹಿತ ಕಿತ್ತುಹಾಕುವ ಮತ್ತು ವಿರೋಧಿಸುವವರನ್ನು ದಬ್ಬಾಳಿಕೆ ಮಾಡುವ ಮೂಲಕ ಜಿಯೋನಿಸಂ ಮುಂದುವರಿಯುತ್ತದೆ. ಇಸ್ರೇಲ್ ಸರ್ಕಾರವು ತೀವ್ರವಾದ ದಿಗ್ಬಂಧನಗಳ ಮೂಲಕ ಜನರನ್ನು ಇಂಚಿಂಚಾಗಿ ಕೊಲ್ಲುತ್ತಿದೆ, ಕುಡಿಯುವ ನೀರು, ಅಗತ್ಯ ಔಷಧಗಳು ಮತ್ತು ವಿದ್ಯುತ್ ಅನ್ನು ಕಡಿತಗೊಳಿಸುತ್ತಿದೆ. ಅಂತರಾಷ್ಟ್ರೀಯ ಶಾಂತಿ ಮಾತುಕತೆಗಳ ಮೂಲಕ ಮಾಡಿಕೊಂಡ ಒಪ್ಪಂದಗಳು ಮತ್ತು ಶಾಂತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಪ್ಯಾಲೆಸ್ತೀನ್ ಜನರನ್ನು ಅವರ ತಾಯ್ನಾಡಿನಲ್ಲಿ ನಿರಾಶ್ರಿತರನ್ನಾಗಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಿಲಿಟರಿ ಮಧ್ಯಸ್ಥಿಕೆಗಳ ಮೂಲಕ ಪ್ಯಾಲೆಸ್ತೀನ್ ನಾಗರಿಕರನ್ನು ಪ್ರತಿದಿನ ಕೊಲ್ಲಲಾಗುತ್ತಿದೆ ಮತ್ತು ಜೈಲಿನಲ್ಲಿ ಇರಿಸಲಾಗುತ್ತಿದೆ. ಸಂಕಷ್ಟದಲ್ಲಿರುವ ಪ್ಯಾಲೆಸ್ತೀನ್ ಜನರ ಉಳಿವಿಗಾಗಿ ಹೋರಾಟ ನಡೆಯುತ್ತಿದೆ ಎಂಬುದು ಎಸ್.ಡಿ.ಪಿ.ಐ ಯ ಹೇಳಿಕೆಗಳು. ರಕ್ತಪಾತ ಮತ್ತು ಹತ್ಯಾಕಾಂಡಗಳಿಗೆ ಇಸ್ರೇಲಿ ಸರ್ಕಾರವೇ ಸಂಪೂರ್ಣ ಹೊಣೆಯಾಗಿದ್ದು, ಪ್ಯಾಲೆಸ್ತೀನ್ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ. ಹಮಾಸ್ ಭಯೋತ್ಪಾದಕ ದಾಳಿಯನ್ನು ಸಮರ್ಥಿಸುತ್ತಿದೆ.