ತಿರುವನಂತಪುರಂ: ಕೇರಳ ರಾಜ್ಯ ಅಂಗವಿಕಲರ ಕಲ್ಯಾಣ ನಿಗಮವನ್ನು ಮರುನಾಮಕರಣ ಮಾಡಲಾಗಿದೆ. ಇನ್ನು ಮುಂದೆ ಕೇರಳ ಸ್ಟೇಟ್ ಡಿಫರೆನ್ಶಿಯಲ್ ಏಬಲ್ ವೆಲ್ಫೇರ್ ಕಾಪೆರ್Çರೇಷನ್ ಅಥವಾ ಕೇರಳ ರಾಜ್ಯ ವಿಶೇಷ ಚೇತನ ಅಭಿವೃದ್ದಿ ಕಾಪೆರ್Çರೇಷನ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ.
ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಡಾ. ಆರ್ ಬಿಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಈಗಾಗಲೇ ವಿಕಲಾಂಗರ ಪದದ ಬದಲು ದಿವ್ಯಾಂಗರ ಪದ ಬಳಸಿದೆ. ಈ ಪದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಮೂಲಕ ಪರಿಚಯಿಸಿದರು. ಆಗಸ್ಟ್ ನಲ್ಲಿ ನಡೆದ ರಾಜ್ಯ ಮಂಡಳಿಯ ನಿರ್ದೇಶಕರ ಸಭೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಕಂಪನಿಗಳ ಸಚಿವಾಲಯಕ್ಕೆ ಮರುನಾಮಕರಣದ ಕುರಿತು ಆನ್‍ಲೈನ್ ಅರ್ಜಿಯನ್ನು ಸಲ್ಲಿಸಿತ್ತು, ನಂತರ ಹೊಸ ಹೆಸರನ್ನು ಅನುಮೋದಿಸಲಾಗಿದೆ.
ಅ.25ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಿ ಸರ್ಕಾರ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಸಂಪೂರ್ಣ ಹೊಸ ಪದ ಅಳವಡಿಸಲು ಕ್ರಮಕೈಗೊಳ್ಳಲು ಸೂಚನೆ ನೀಡುವುದಾಗಿ ಸಚಿವರು ತಿಳಿಸಿರುವರು.