HEALTH TIPS

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

               ವದೆಹಲಿ: ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.

            ಮೊಹಮ್ಮದ್ ಇಮ್ರಾನ್ ಖಾನ್(39) ಬಂಧಿತ ಆರೋಪಿ. ಎನ್‌ಐಎನ ಅಬ್ಸ್ಕಂಡರ್ ಟ್ರ್ಯಾಕಿಂಗ್ ತಂಡ (ಎಟಿಟಿ) ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಲ್ಲಿ ಈತನನ್ನು ಸೆರೆ ಹಿಡಿದಿದೆ.

              ಇಮ್ರಾನ್ ಖಾನ್ ಜೂ.2021ರಿಂದ ಪರಾರಿಯಾಗಿದ್ದ. ಎನ್‌ಐಎ ಬೆಂಗಳೂರು ಶಾಖೆಯ ಎಟಿಟಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ನಿಗಾ ಇರಿಸಿತ್ತು. ಈತ ತಮಿಳುನಾಡಿನ ರಾಮನಾಥಪುರಂ ನಿವಾಸಿ. ಈ ಪ್ರದೇಶದಲ್ಲಿ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ ಕುಖ್ಯಾತ ಮಾನವ ಕಳ್ಳಸಾಗಾಣಿಕೆದಾರ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎನ್‌ಐಎ ಹೇಳಿದೆ.

               ಇಮ್ರಾನ್ ಖಾನ್, ಶ್ರೀಲಂಕಾದ ಪ್ರಜೆ ಈಶನ್ ಎಂಬಾತನ ಸಹಯೋಗದೊಂದಿಗೆ ಈ ಹಿಂದೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ನೊಂದಿಗೆ ಸಂಬಂಧ ಹೊಂದಿದ್ದ. 38 ಶ್ರೀಲಂಕಾ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ತಮಿಳುನಾಡಿನ ವಿವಿಧ ಸ್ಥಳಗಳಿಗೆ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಿದ್ದ.

              ಶ್ರೀಲಂಕಾದ ಪ್ರಜೆಗಳಿಗೆ ಕೆನಡಾಕ್ಕೆ ವಲಸೆ ಹೋಗಲು ಕಾನೂನುಬದ್ಧ ದಾಖಲಾತಿ ಮತ್ತು ಉದ್ಯೋಗಾವಕಾಶ ನೀಡುವ ಆಮಿಷ ಒಡ್ಡಿದ್ದ. ಇತರ ಆರೋಪಿಗಳ ನೆರವಿನಿಂದ ಅವರನ್ನು ಅವರ ತಾಯ್ನಾಡಿನಿಂದ ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಸಾಗಿಸುತ್ತಿದ್ದ. ತರುವಾಯ ಇತರ ರಾಷ್ಟ್ರಗಳಿಗೆ ಸಾಗಿಸುತ್ತಿದ್ದ. ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಪ್ರಮುಖ ವ್ಯಕ್ತಿ ಎಂದು ತನಿಖೆ ಸಂಸ್ಥೆ ಬಹಿರಂಗಪಡಿಸಿದೆ.

                  13 ಶಂಕಿತರ ಬಂಧನ: ಅ.5 2021 ರಂದು ದಿನಕರನ್, ವಿಶ್ವನಾಥನ್, ರಸೂಲ್, ಸತಮ್ ಉಷೇನ್ ಮತ್ತು ಅಬ್ದುಲ್ ಮುಹೀತು ಎಂಬ ಐವರು ಭಾರತೀಯ ಆರೋಪಿಗಳ ವಿರುದ್ಧ ಎನ್‌ಐಎ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ಈವರೆಗೆ ಒಟ್ಟು 13 ಶಂಕಿತರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries