ಕಾಸರಗೋಡು: ದೇವಾಲಯಗಳ ಅಭಿವೃದ್ಧಿ ಸಮಾಜದ ಉನ್ನತಿಯ ದ್ಯೋತಕ ಎಂಬುದಾಗಿ ನಿವೃತ್ತ ಶಿಕ್ಷಕಿ, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ತಿಳಿಸಿದ್ದಾರೆ. ಅವರು ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದ ವೇದಿಕೆಯಲ್ಲಿ ಭಾನುವಾರ ಆರಂಭಗೊಂಡ ದಸರಾ ಸಾಂಸ್ಕøತಿಕೋತ್ಸವ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಮುಖ್ಯ ಪಾತ್ರಿ ಪ್ರವೀಣ್ ನಾಯಕ್ ದೀಪ ಬೆಳಗಿಸಿ ಹತ್ತು ದಿವಸಗಳ ಕಾಲ ನಡೆಯಲಿರುವ ದಸರಾಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದರು. ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ಅಧ್ಯಕ್ಷ ವಾಮನರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಕೆ.ಎನ್ ವೆಂಕಟ್ರಮಣ ಹೊಳ್ಳ, ಸಮಾಜಸೇವಕ, ಉದ್ಯಮಿ ಅರಿಬೈಲ್ ಗೋಪಾಲ ಶೆಟ್ಟಿ, ಉದ್ಯಮಿ ನಿರಂಜನ ಕೊರಕ್ಕೋಡು, ಖ್ಯಾತ ಸಂಕೀರ್ತನಾಕಾರ ಜಯಾನಂದ ಕುಮಾರ್ ಹೊಸದುರ್ಗ, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ವಕೀಲ ಥಾಮಸ್ ಡಿ.ಸೋಜ, ಜಗದೀಶ್ ಕೂಡ್ಲು, ಸಂತೋಷ್ ಪುತ್ತೂರು, ಪತ್ರಕರ್ತರಾದ ಜಗನ್ನಾಥ ಶೆಟ್ಟಿ ಪಿ.ಕೆ, ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ದಸರಾ ಸಂಕೀರ್ತನಾ ದಶಾಹ ಕಾರ್ಯಕ್ರಮಕ್ಕೆ ಸಂಕೀರ್ತನಾಕಾರ ಜಯಾನಂದ ಕುಮಾರ್ ಹೊಸದುರ್ಗ ಚಾಲನೆ ನೀಡಿದರು. ಪ್ರತಿ ದಿನ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.