ಬದಿಯಡ್ಕ : ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕಾಸರಗೋಡು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಕೇರಳ ಕನ್ನಡ ಪತ್ರಕರ್ತರ ಸಮ್ಮಿಲನ 'ಹರ್ಷೋಲ್ಲಾಸ' ಅ. 3ರಂದು ಬದಿಯಡ್ಕ ಸನಿಹದ ವಳಮಲೆ ಇರಾ ಸಭಾ ಭವನದಲ್ಲಿ ಜರುಗಲಿದೆ.
ಬೆಳಗ್ಗೆ 9.30ಕ್ಕೆ ನೋಂದಾವಣೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಸಮಾರಂಭ ಉದ್ಘಾಟಿಸುವರು. ಸಂಘಟನೆ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ಕೆಯುಡಬ್ಲ್ಯೂಜೆ ಕನಾಟಕ ರಾಜ್ಯಾದ್ಯಕ್ಷ ಶಿವಾನಂದ ತಗಡೂರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಂತಾ ಬಾರಡ್ಕ, ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಿಕ ಸಂಘಟನೆ ಪದಾಧಿಕಾರಿಗಳು, ಕಲಾವಿದರು ಪಾಲ್ಗೊಳ್ಳುವರು. ಈ ಸಂದರ್ಭ ಪತ್ರಕರ್ತರ ಗುರುತಿನ ಚೀಟಿ ವಿತರಣೆ, ಪತ್ರಕರ್ತರ ಕುಟುಂಬ ಸದಸ್ಯರು ಹಾಗೂ ಇತರ ಕಲಾವಿದರಿಂದ ರಾಗ-ತಾಳ-ನಾಟ್ಯ ಕಾರ್ಯಕ್ರಮ, ಅದೃಷ್ಟ ಚೀಟಿ ಕಾರ್ಯಕ್ರಮ ನಡೆಯಲಿರುವುದು.