ಕುಂಬಳೆ: ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಎದುರಾಗಿ ಹಾಗೂ ದೇವರ ಗುಡ್ಡೆಯನ್ನು ಕೊರೆದು ಮಣ್ಣನ್ನು ಸಾಗಿಸುತ್ತಿರುವುದರ ವಿರುದ್ಧ ಅನಂತಪುರ ಉಳಿಸಿ ಕ್ರಿಯಾ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ವೇದಿಕೆಯಲ್ಲಿ 28 ನೇ ದಿನವಾದ ಭಾನುವಾರ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ ಹಾಗೂ ಪಕ್ಷಿ ವೀಕ್ಷಕ ಪರಿಸರ ಸ್ನೇಹಿ ಅಧ್ಯಾಪಕ ರಾಜು ಕಿದೂರು ಅವರು ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಚೇಂಬರ್ ಮೀಟಿಂಗ್ ನ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಶರೀಫ್ ಕಣ್ಣೂರು, ಕಾರ್ಯದರ್ಶಿ ಸುನಿಲ್ ಅನಂತಪುರ, ಕೃಷ್ಣ ಅಳ್ವ ನಾವೂರು, ಅಶ್ರಫ್, ರತ್ನಾಕರ ಅನಂತಪುರ, ವಿಜಯನ್, ಸ್ವಾಗತ್ ಸೀತಂಗೋಳಿ, ಗೋಪಾಲಕೃಷ್ಣ ಪೆರ್ಣೆ ಮತ್ತು ಸಮಿತಿಗೆ ಸಂಬಂಧಪಟ್ಟ ಹಲವರು ಮಾತನಾಡಿದರು. ಸಮಸ್ಯೆಗೆ ಶಾಶ್ವತ ಪರಿಹಾರವಾಗದೆ ಸತ್ಯಾಗ್ರಹವನ್ನು ಕೊನೆಗೊಳಿಸದಿರುವಂತೆ ತೀರ್ಮಾನ ಕೈಗೊಳ್ಳಲಾಯಿತು.