ಬದಿಯಡ್ಕ: ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರು ನಡೆಸುತ್ತಿರುವ ಗ್ರಾಮ ಪರ್ಯಟನೆಯ ಭಾಗವಾಗಿ ಮಂಗಳವಾರ ಕುಂಬ್ಡಾಜೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು. ಈ ಸಂದರ್ಭ ಕುಂಬ್ಡಾಜೆ ಗ್ರಾ.ಪಂ. ಪಂಚಾಯಿತಿ ಆಡಳಿತ ಸಮಿತಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿಗಳು ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಜತೆ ಸಂವಾದ ನಡೆಸಿದರು. ಪಂಚಾಯಿತಿ ವ್ಯಾಪ್ತಿಯ ಏಕೈಕ ಸರ್ಕಾರಿ ಶಾಲೆಯಾಗಿರುವ ಜಿ.ಜೆ.ಬಿ.ಎಸ್. ಕುಂಬ್ಡಾಜೆ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸುವುದು, ಎರಡನೇ ವಾರ್ಡ್‍ನ ಪುತ್ರಕಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಘೋಷಿಸುವುದು, ಒಡೆದು ಹೋಗಿರುವ ವಿಸಿಬಿಗಳ ದುರಸ್ತಿ ಹಾಗೂ ಕಂದಾಯ ಜಾಗವನ್ನು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಟ್ಯಾಂಕ್‍ಗಳಿಗೆ ಮಂಜೂರು ಮಾಡುವುದು, ಹದಗೆಟ್ಟ ರಸ್ತೆಗಳ ದುರಸ್ತಿ, ಅಂಗನವಾಡಿಗಳನ್ನು ಸ್ಮಾರ್ಟ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಜಿಲ್ಲಾಧಿಕಾರಿಗೆ ಮಂಡಿಸಲಾಯಿತು.
ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಸ್ಥಾಯಿ ಸಮಿತಿ ಅಧ್ಯಕ್ಷÀ ಅಬ್ದುಲ್ ರಝಾಕ್, ವಾರ್ಡ್ ಸದಸ್ಯರಾದ ಹರೀಶ್ ಗೋಸಾಡ, ಮುಮ್ತಾಜ್, ಜಿ.ಕೃಷ್ಣ ಶರ್ಮ, ಜೌರ, ಕೆ.ಸುನೀತಾ ರೈ, ಸುಂದರ ಮವ್ವಾರು, ಮೀನಾಕ್ಷಿ, ಆಯೇಷತ್ ಮರ್ಷಿದಾ, ಸಿಡಿಎಸ್ ಅಧ್ಯಕ್ಷೆ ರೋಶನಿ, ಯೋಜನಾ ಸಮಿತಿ ಉಪಾಧ್ಯಕ್ಷ ಎಸ್. ಕೆ.ಹರೀಶ್, ಕಾರ್ಯನಿರ್ವಹಣಾಧಿಕಾರಿಗಳು ಮತ್ತಿತರರು ಇದ್ದರು.