ಮುಳ್ಳೇರಿಯ: ಮುಳಿಯಾರ್ ಗ್ರಾ.ಪಂ.ನ ಸಹಾಯಕ ಕಾರ್ಯದರ್ಶಿ ಪಿ.ವಿ.ಶ್ರೀನಿವಾಸನ್ ನೇತೃತ್ವದಲ್ಲಿ ಮುಳಿಯಾರ್ ಗ್ರಾ.ಪಂ.ನ ಒಂದನೇ ವಾರ್ಡಿನ ಮಾಸ್ತಿಕುಂಡ್ ಚೂರಿಮಲೆಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸುಡುತ್ತಿದ್ದುದನ್ನು ನೌಕರರು ನೇರವಾಗಿ ಪತ್ತೆಹಚ್ಚಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡರು.
ವಾಹನದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಬೇರೆಡೆಯಿಂದ ತಂದು ಸುಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕಾನೂನು ಉಲ್ಲಂಘಿಸುವವರನ್ನು ಹಿಡಿಯಲು ಪಂಚಾಯಿತಿ ನೌಕರರು ಸಿದ್ಧತೆ ನಡೆಸಿದ್ದರು. ಆದೂರು ಪೋಲೀಸರು ಸ್ಥಳಕ್ಕಾಗಮಿಸಿ ಸಹಾಯ ಮತ್ತು ಸೂಚನೆ ನೀಡಿದರು. ಇಂತಹ ಚಟುವಟಿಕೆಗಳು ಮುಂದುವರಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಂಚಾಯಿತಿ ಕಾರ್ಯದರ್ಶಿ ಎ.ಆರ್.ಪ್ರಶಾಂತ್ ಕುಮಾರ್ ಮಾಹಿತಿ ಎಚ್ಚರಿಕೆ ನೀಡಿರುವರು.