ಮುಳ್ಳೇರಿಯ: ಅಯರ್ಕಾಡು ಗೌರಿಯಡ್ಕ ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ ವಿಜಯ ದಶಮಿ ದಿನವಾದ ನಿನ್ನೆ ಪೂರ್ವಾಹ್ನ 10 ಕ್ಕೆ 36ನೇ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.
ಸಮಾರಂಭದಲ್ಲಿ ಕುಂಟಾರು ತಾಂತ್ರಿಕ ಸದನದ ತಂತ್ರಿವರ್ಯ ಶ್ರೀ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಮಂದಿರ ಗುರುಸ್ವಾಮಿ ರವೀಂದ್ರನ್ ಆಯಾರ್ಕಾಡ್ ಶ್ರೀ ಅಯ್ಯಪ್ಪ ಸ್ವಾಮಿಗೆ ಪೂಜೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಮಂದಿರಗಳಿಂದ ಆಗಮಿಸಿದದ ಗುರುಸ್ವಾಮಿವರ ಆಶೀರ್ವಾದದೊಂದಿಗೆ ಆಮಂತ್ರಣ ಪತ್ರಿಕೆಯನ್ನು ವಾಸುದೇವ ತಂತ್ರಿಗಳು ಅಯ್ಯಪ್ಪನ್ ತಿರುವಿಳಕ್ ಮಹೊತ್ಸವದ ಗೌರವಾಧ್ಯಕ್ಷ ರಘುರಾಮ್ ಬಲ್ಲಾಳ್ ಇವರಿಗೆ ನೀಡಿ ಬಿಡುಗಡೆಗೊಳಿಸಿದರು .
ತಂಬಾನ್ ಮಾಸ್ತರ್ ಆಯರ್ಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಶೆಣೈ ಬದಿಯಡ್ಕ ,ಎಸ್.ಎನ್, ಮಯ್ಯ ಬದಿಯಡ್ಕ, ಡಾ. ವಿ.ವಿ. ರಮಣ ಮುಳ್ಳೆರಿಯ, ನಾರಾಯಣ ಪೂಜಾರಿ ಬಂಬ್ರಾಣ ಕೊಟ್ಯದಮನೆ , ಗಣೇಶ ವತ್ಸ ಮುಳ್ಳೇರಿಯ, ರಂಗನಾಥ್ ರಾವ್ ಮುಳ್ಳೇರಿಯ, ಶಶಿಧರನ್ ಸುಮಂಗಲಿ ಮುಳ್ಳೇರಿಯ, ವಿನೋದ್ ಕುಮಾರ್ ಸೆಂಚುರಿ, ಕಲಾ ಮಾಧವನ್ ನಾಯರ್ ಅಯರ್ಕಾಡ್ , ಪ್ರಸಾದ್ ಜ್ಯೋತಿಷ್ಯರು ಗೌರಿಯಡ್ಕ, ಐತಪ್ಪ ಮವ್ವಾರು, ಸುಕುರಾಮನ್ ನಾಯರ್, ಜಗದೀಶ್ ರಾವ್ ಪೈಕಾನ , ವಿಜಯನ್ ಬಾಜಿರ್ತೊಟ್ಟಿ, ಕುಂಞರಾಮನ್ ಗುರುಸ್ವಾಮಿ ಪಾರ್ತಕೊಚ್ಚಿ, ಚಂದ್ರನ್ ಗುರುಸ್ವಾಮಿ ನಾಟೇಕಲ್, ಗೋಪಾಲನ್ ನಾಯರ್ ಮಂಗಳೂರು, ಸುಬ್ಬರಾವ್ ಕೋಳಿಕ್ಕಜೆ, ರವೀಂದ್ರನ್ ಆಯಾರ್ಕಾಡ್ ದೇವರಾಜ್ ಕೋಳಿಕ್ಕಜೆ ಮುಂತಾದವರು ಉಪಸ್ಥಿತರಿದ್ದರು.
ರಘುರಾಮ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಅಕ್ಷಿತ ಕೋಳಿಕ್ಕಜೆ ಪ್ರಾರ್ಥನೆ ಹಾಡಿದರು. ಚಂದ್ರನ್ ಕೋಳಿಕ್ಕಜೆ ಸ್ವಾಗತಿಸಿ,ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು.