ನವದೆಹಲಿ: ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಗೋಪಿನಾಥ್ ರವೀಂದ್ರನ್ ಅವರನ್ನು ಎಡ ಸರ್ಕಾರವು ನಿಯಮಗಳನ್ನು ಉಲ್ಲಂಘಿಸಿ ಮರುನೇಮಕ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿರುವರು.
ಕಣ್ಣೂರು ವಿಶ್ವವಿದ್ಯಾನಿಲಯ ಕಾಯ್ದೆ ಪ್ರಕಾರ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನು ಉಪಕುಲಪತಿಯಾಗಿ ನೇಮಕ ಮಾಡುವಂತಿಲ್ಲ. ಆದರೆ ಮರು ನೇಮಕಕ್ಕೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ನ್ಯಾಯಾಲಯದಲ್ಲಿ ವಿಷಯ ಪ್ರಸ್ತಾಪವಾದಾಗ, ಮರು ನೇಮಕಕ್ಕೆ ನಿಯಮಾನುಸಾರ ಅರ್ಹತಾ ಮಾನದಂಡವನ್ನೂ ಅನುಸರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಕುಲಪತಿ, ರಾಜ್ಯಪಾಲರ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸುಪ್ರೀಂ ಕೋರ್ಟ್ ಮರು ನೇಮಕಕ್ಕೆ ಅರ್ಹತಾ ಮಾನದಂಡಗಳ ಸಡಿಲಿಕೆಗೆ ಅವಕಾಶ ನೀಡಬಹುದೇ ಎಂದು ನ್ಯಾಯಾಲಯಕ್ಕೆ ಕೇಳಿದರು. ಎಲ್ಲ ಕಕ್ಷಿದಾರರ ವಾದವನ್ನು ಆಲಿಸಿದ ನ್ಯಾಯಾಲಯವು ತೀರ್ಪಿಗಾಗಿ ಅರ್ಜಿಗಳನ್ನು ಮುಂದೂಡಿತು.