ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್ ದಾಳಿ ವಿಚಾರವಾಗಿ ಗುಪ್ತಚರ ವಿಭಾಗದ ಮುಖ್ಯಸ್ಥರ ವಿರುದ್ಧ ಟೀಕೆ ಮಾಡಿ ಬಳಿಕ ಕ್ಷಮೆ ಕೋರಿದ್ದಾರೆ.
ಎಕ್ಸ್ ನಲ್ಲಿ ಬಹಿರಂಗವಾಗಿಯೇ ಗುಪ್ತಚರ ವಿಭಾಗದ ಮುಖ್ಯಸ್ಥರ ವಿರುದ್ಧ ಅಸಮಾಧಾನ ಪ್ರಕಟಿಸಿದ್ದ ನೇತನ್ಯಾಹು, ತಮ್ಮ ಗುಪ್ತಚರ ಅಧಿಕಾರಿಗಳು, ಅ.07 ರಂದು ಹಮಾಸ್ ದಾಳಿ ನಡೆಸಲು ಯೋಜಿಸಿರುವ ವಿಷಯದ ಬಗ್ಗೆ ತಮಗೆ ಎಚ್ಚರಿಕೆಯನ್ನು ನೀಡಿರಲಿಲ್ಲ ಎಂದು ಹೇಳಿದ್ದರು. ಬಳಿಕ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದಾರೆ.
ಭಾನುವಾರದಂದು (ಶನಿವಾರದಂದು 2300 GMT ಯ ಸುಮಾರಿಗೆ) X ನಲ್ಲಿ ನೇತನ್ಯಾಹು ಪೋಸ್ಟ್ ಮಾಡಿದ್ದ ಟೀಕೆಗಳು ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು ಮತ್ತು ನೆತನ್ಯಾಹು ಅವರ ಕ್ಯಾಬಿನೆಟ್‌ನಲ್ಲಿ ಬಿರುಕು ಉಂಟುಮಾಡಿತು.
ನೇತನ್ಯಾಹು ವಿರುದ್ಧ ಹಮಾಸ್‌ಗೆ ಸಂಬಂಧಿಸಿದ ಗುಪ್ತಚರ ಮತ್ತು ಕಾರ್ಯಾಚರಣೆಯ ವೈಫಲ್ಯಗಳ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದಕ್ಕಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹಮಾಸ್ ದಾಳಿಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳು- ಮಿಲಿಟರಿಯ ಮುಖ್ಯಸ್ಥರು ಮತ್ತು ಶಿನ್ ಬೆಟ್ ದೇಶೀಯ ಗೂಢಚಾರಿಕೆ ಸೇವೆಯಿಂದ ಹಿಡಿದು ಅವರ ಹಣಕಾಸು ಮಂತ್ರಿಯವರೆಗೆ ಎಲ್ಲರೂ ತಮ್ಮ ವೈಫಲ್ಯಗಳನ್ನು ಒಪ್ಪಿಕೊಂಡಿದ್ದಾರೆ, ನೆತನ್ಯಾಹು ಈ ವರೆಗೆ ಅದನ್ನು ಒಪ್ಪಿಕೊಂಡಿಲ್ಲ.