ಕಾಸರಗೋಡು: ಭಾರತೀಯ ರಾಷ್ಟ್ರೀಯತೆಯ ಹೆಗ್ಗುರುತಾಗಿರುವ ಬಹುತ್ವವನ್ನು ರಕ್ಷಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂಬುದಾಗಿ ಶಾಸಕ ಸಿ.ಎಚ್ ಕುಞಂಬು ತಿಳಿಸಿದ್ದಾರೆ. ಅವರು ಭಾಷಾ ಅಧ್ಯಯನಕ್ಕಾಗಿ ಕಣ್ಣೂರು ವಿಶ್ವವಿದ್ಯಾನಿಲಯ ಕಾಸರಗೋಡು ಚಾಲಾಕ್ಯಾಂಪಸ್‍ನಲ್ಲಿ ಸ್ಥಾಪಿಸಿರುವ ಬಹುಭಾಷಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣೂರು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಗೋಪಿನಾಥ್ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎಂ.ಶ್ರೀಧರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ರಿಜು ಮೋಲ್, ಡಾ.ರಾಧಾಕೃಷ್ಣ ಬೆಳ್ಳೂರು ಮತ್ತು ಡಾ.ಸಿ.ಸಿ.ಮಣಿಕಂಠನ್ ಉಪಸ್ಥಿತರಿದ್ದರು. ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಸ್ವಾಗತಿಸಿದರು. ಪೆÇ್ರ.ಎಂ.ಸಿ.ರಾಜು ವಂದಿಸಿದರು.
ವಿಕ್ರಮ್ ಕಾಂತಿಕೆರೆ, ರಾಧಾಕೃಷ್ಣನ್ ಪೆರುಂಬಳ, ಎಂ.ಎ.ಮುಮ್ತಾಜ್, ವಿ.ಬಿ.ಕುಳಮರ್ವ, ರವೀಂದ್ರನ್ ಪಾಡಿ, ಅಸೀಂ ಮಣಿಮುಂಡ, ಗಣೇಶ್ ಪೈ, ಶ್ರೀನಿವಾಸ ಸ್ವರ್ಗ, ವಿ.ಆರ್.ಸದಾನಂದನ್, ಜ್ಯೋತ್ಸ್ನಾ ಕಡಂದೇಲು, ಸುಂದರ ಬಾರಡ್ಕ, ಮೀನಾಕ್ಷಿ ಬಡ್ಡೋಡಿ, ವಿರಾಜ್ ಅಡೂರು, ದಿವ್ಯಾ ಗುತ್ತಿ ವಿವಿಧ ಭಾಷೆಗಳಲ್ಲಿ ಕವನಗಳನ್ನು ವಾಚಿಸಿದರು. ಕಾಸರಗೋಡಿನ ಭಾಷಾ ವೈವಿಧ್ಯತೆ ಮತ್ತು ಸಂಸ್ಕøತಿಗಳ ಸಂಗಮ, ಸಾಂಸ್ಕøತಿಕ ವೈವಿಧ್ಯತೆಯ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.