HEALTH TIPS

ವಸಾಹತುಶಾಹಿ ಕ್ರಿಮಿನಲ್‌ ಕಾಯ್ದೆ: ಪರ್ಯಾಯ ಕರಡು ಅನುಮೋದಿಸದ ಸ್ಥಾಯಿ ಸಮಿತಿ

                ವದೆಹಲಿ (PTI): ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯವಾಗಿ ಜಾರಿಗೊಳಿಸಲು ಸಿದ್ಧಪಡಿಸಿರುವ ಮಸೂದೆಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ನಡೆದ ಸಭೆಯಲ್ಲಿ ಕರಡು ಮಸೂದೆಗೆ ಅನುಮೋದನೆ ನೀಡಿಲ್ಲ.

                 ಉಲ್ಲೇಖಿತ ಮಸೂದೆಗಳ ಅಧ್ಯಯನಕ್ಕೆ ವಿರೋಧಪಕ್ಷಗಳ ಕೆಲ ಸದಸ್ಯರು ಇನ್ನಷ್ಟು ಕಾಲಾವಕಾಶ ಕೋರಿರುವುದು ಇದಕ್ಕೆ ಕಾರಣವಾಗಿದೆ. ಸಮಿತಿಯ ಮುಂದಿನ ಸಭೆಯು ನವೆಂಬರ್ 6ರಂದು ನಡೆಯಲಿದೆ.

              ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷ ಬ್ರಿಜ್‌ ಲಾಲ್‌ ಅವರಿಗೆ 'ಸಮಿತಿ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಬೇಕು' ಎಂದು ಒತ್ತಾಯಿಸಿ ವಿರೋಧಪಕ್ಷಗಳ ಹಲವು ಸದಸ್ಯರು ಪತ್ರ ಬರೆದಿದ್ದಾರೆ.

               ಪರಿಣತರ ಅಭಿಪ್ರಾಯಗಳನ್ನು ಸಮಿತಿ ಆಲಿಸಿರಬಹುದು ಆದರೆ, ಭಾಗಿದಾರರ ಅಭಿಪ್ರಾಯಗಳನ್ನೂ ವಿವರವಾಗಿ ಆಲಿಸಿಲ್ಲ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

               ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿ ಆಗಲಿದೆ. ಹೀಗಾಗಿ ವಕೀಲರು, ಕಕ್ಷಿದಾರರು ಸೇರಿ ಎಲ್ಲ ಭಾಗಿದಾರರ ಮಾತು ಆಲಿಸುವುದು ಅಗತ್ಯ ಎಂದು ಸದಸ್ಯರೊಬ್ಬರು ಹೇಳಿದರು.

               ವಸಾಹತುಶಾಹಿ ಕಾಲದ ಕಾಯ್ದೆಗಳ ಆಮೂಲಾಗ್ರ ಬದಲಾವಣೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪರ್ಯಾಯವಾಗಿ ಮೂರು ಮಸೂದೆಗಳನ್ನು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡಿಸಿದ್ದರು.

                 ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಮಂಡಿಸಲಾಗಿತ್ತು. ಕ್ರಮವಾಗಿ ಭಾರತೀಯ ದಂಡಸಂಹಿತೆ (ಐಪಿಸಿ), ಕ್ರಿಮಿನಲ್‌ ಅಪರಾಧ ಸಂಹಿತೆ 1973 (ಸಿಆರ್‌ಪಿಸಿ), ಭಾರತೀಯ ಸಾಕ್ಷ್ಯ ಕಾಯ್ದೆ 1987ಕ್ಕೆ ಪರ್ಯಾಯವಾಗಿ ಈ ಮಸೂದೆಗಳನ್ನು ಮಂಡಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries