ಮುಳ್ಳೇರಿಯ : ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯದ ಆತಿಥ್ಯದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ 2023-24ರ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಅಂಗವಾಗಿ ಸಮುದಾಯದ ಸದಸ್ಯರಿಗಾಗಿ ಶಟಲ್ ಬ್ಯಾಂಡ್ಮಿಂಟನ್ ಸ್ಪರ್ಧೆ ನಾಳೆ(ಅ. 29ರಂದು) ಬೆಳಗ್ಗೆ 9.30ರಿಂದ ನಡೆಯಲಿದೆ. ಮುಳ್ಳೇರಿಯದ ಗಜಾನನ ಕಿರಿಯ ಪ್ರಾಥಮಿಕ ಶಾಲೆಯ ಸಮೀಪದ ಗಣೇಶ್ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಂಡ್ಮಿಂಟನ್ ಸ್ಪರ್ಧೆಯ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಗಳು ನಡೆಯಲಿವೆ. ವಿವಿಧ ವಲಯಗಳ ಶಿವಳ್ಳಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.