ಕೊಚ್ಚಿ: ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳಲ್ಲಿ ಪೋಲೀಸರ ವರದಿ ವಿಳಂಬವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಪೋಲೀಸ್ ಠಾಣೆಗೆ ಅಭಿಯೋಜಕರು ವರದಿ ಕೇಳಿದರೆ ಸಿಗುವುದಿಲ್ಲ ಎಂದು ನ್ಯಾಯಮೂರ್ತಿ ಪಿ.ವಿ. ಕುಂಞÂ್ಞ ಕೃಷ್ಣನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಭಿಯೋಜಕರು ಕೋರಿದರೆ ವರದಿ ನೀಡುವಂತೆ ಎಲ್ಲಾ ಪೋಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಏಕ ಪೀಠ ಡಿಜಿಪಿಗೆ ಆದೇಶಿಸಿದೆ.
ಚೆಗುವೇರಾ ಚಿತ್ರ ಸ್ಥಳಾಂತರದ ವಿವಾದದ ಹಿನ್ನೆಲೆಯಲ್ಲಿ ತಿರುವನಂತಪುರಂನ ವಟ್ಟಕರಿಕಾಕಂ ನಿವಾಸಿ ಅನಿಲ್ ಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕಪೀಠ ಈ ನಿರ್ದೇಶನ ನೀಡಿದೆ. ತಿರುವನಂತಪುರಂ ಶ್ರೀಕಾರ್ಯಂ ಪೆÇಲೀಸರು ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆಯಂತೆ ಪ್ರಾಸಿಕ್ಯೂಟರ್ ವರದಿ ಕೇಳಿದ್ದರೂ ಕೊಟ್ಟಿರಲಿಲ್ಲ.
ಈ ಬಗ್ಗೆ ಹೈಕೋರ್ಟ್ ಸ್ಪಷ್ಟನೆ ನೀಡಿತ್ತು. ಇದೇ ತಿಂಗಳ 26ರೊಳಗೆ ವರದಿ ಸಲ್ಲಿಸದಿದ್ದರೆ ಶ್ರೀಕಾರ್ಯಂ ಠಾಣೆಯ ಸಿಐ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.