ಕಾಸರಗೋಡು: 'ಬಹುತ್ವದ ಭಾರತಕ್ಕಾಗಿ-ದುರಾಡಳಿತದ ವಿರುದ್ಧ' ಎಂಬ ಧ್ಯೇಯವಾಕ್ಯದೊಂದಿಗೆ ಸ್ವತಂತ್ರ ಕಾರ್ಮಿಕರ ಸಂಘದ (ಎಸ್‍ಟಿಯು)ವತಿಯಿಂದ ರಾಜ್ಯವ್ಯಾಪಕವಾಗಿ ನಡೆಯಲಿರುವ ಜಾಥಾಕ್ಕೆ ಕಾಸರಗೋಡು ತಾಯಲಂಗಾಡಿಯಲ್ಲಿ ಚಾಲನೆ ನೀಡಲಾಯಿತು. ಸಂಘಟನೆ ರಾಜ್ಯಾಧ್ಯಕ್ಷ ವಕೀಲ ಎಂ.ರಹಮತುಲ್ಲಾ ಕ್ಯಾಪ್ಟನ್, ಪ್ರಧಾನ ಕಾರ್ಯದರ್ಶಿ ಯು.ಪೆÇೀಕರ್ ವೈಸ್ ಕ್ಯಾಪ್ಟನ್ ಮತ್ತು ಕೋಶಾಧಿಕಾರಿ ಕೆ.ಪಿ.ಮುಹಮ್ಮದ್ ಅಶ್ರಫ್ ಸಂಚಾಲಕರಾಗಿರುವ ಜಾಥಾವನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯದ್ ಸಾದಿಕಲಿ ಶಿಹಾಬ್ ತಙಳ್ ಉದ್ಘಾಟಿಸಿದರು.
ಎಸ್.ಟಿ. ಯು ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಎ.ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಪಿ.ಎಂ.ಎ ಸಲಾಂ, ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಸಿ.ಟಿ.ಅಹ್ಮದಾಲಿ, ಎಸ್.ಟಿ.ಯು ರಾಷ್ಟ್ರೀಯ ಅಧ್ಯಕ್ಷ ಅಹ್ಮದ್ ಕುಟ್ಟಿ ಉನ್ನಿಕುಲಂ, ರಾಜ್ಯ ಕಾರ್ಯದರ್ಶಿ ಮುಸ್ಲಿಂ ಲೀಗ್ ಸದಸ್ಯರು, ಶಾಸಕ ಎನ್.ಎ.ನೆಲ್ಲಿಕುನ್ನು, ವಿ.ಕೆ.ಪಿ.ಹಮೀದಲಿ, ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಕೋಶಾಧಿಕಾರಿ ಪಿ.ಎಂ.ಮುನೀರ್ ಹಾಜಿ, ಎ.ಕೆ.ಎಂ.ಅಶ್ರಫ್ ಶಾಸಕ, ಹಸಿರು ರಾಜ್ಯ ಅಧ್ಯಕ್ಷೆ ಶಾಹಿದಾ ರಶೀದ್, ಮಹಿಳಾ ಲೀಗ್ ರಾಜ್ಯ ಕೋಶಾಧಿಕಾರಿ ಪಿ.ಪಿ.ನಸೀಮಾ, ಎಸ್.ಟಿ.ಯು ರಾಷ್ಟ್ರೀಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ರಾಜ್ಯದ ವಿವಿಧೆಡೆ ಸಂಚರಿಸಲಿರುವ ಜಾಥಾ ನವೆಂಬರ್ 2ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.