ಸಮರಸ ಚಿತ್ರಸುದ್ದಿ: ಕುಂಬಳೆ: ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಎದುರಾಗಿ ಅನಂತಪರ ಉಳಿಸಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿμÁ್ಟವಧಿ ಸತ್ಯಾಗ್ರಹ 25ನೇ ದಿನಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ವಿ. ರಾಜನ್ ಅವರು ಆಗಮಿಸಿ ಬೆಂಬಲ ಘೋಷಿಸಿದರು. ಸತ್ಯಾಗ್ರಹ ಕ್ರಿಯಾ ಸಮಿತಿ ಸದಸ್ಯರು, ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.