ಜೆರುಸಲೇಂ: ಇಸ್ರೇಲ್ ಯುದ್ಧವನ್ನು ಆರಂಭಿಸಿಲ್ಲ. ಆದರೆ ಅದನ್ನು ಕೊನೆಗೊಳಿಸುತ್ತೇವೆ ಎಂದು ಹಮಾಸ್ ಬಂಡುಕೋರರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಜೆರುಸಲೇಂ: ಇಸ್ರೇಲ್ ಯುದ್ಧವನ್ನು ಆರಂಭಿಸಿಲ್ಲ. ಆದರೆ ಅದನ್ನು ಕೊನೆಗೊಳಿಸುತ್ತೇವೆ ಎಂದು ಹಮಾಸ್ ಬಂಡುಕೋರರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಯುದ್ಧದ ಹಂತದಲ್ಲಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಅತ್ಯಂತ ಕ್ರೂರವಾಗಿ ನಮ್ಮ ಮೇಲೆ ಹೇರಲಾಯಿತು ಎಂದು ಅವರು ಹೇಳಿದ್ದಾರೆ.
ಈ ಯುದ್ಧದಲ್ಲಿ ಹಮಾಸ್ ದೊಡ್ಡ ಬೆಲೆಯನ್ನೇ ತೆರಬೇಕಾದಿತು. ಅಲ್ಲದೆ ದೀರ್ಘಕಾಲ ಇದರ ಆಘಾತವನ್ನು ನೆನಪನಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇತಿಹಾಸದಲ್ಲಿ ನಮ್ಮ ಮೇಲೆ ದಾಳಿ ದೊಡ್ಡ ತಪ್ಪು ಮಾಡಿದೆ ಎಂದು ಹಮಾಸ್ ಅರಿತುಕೊಳ್ಳಲಿದೆ. ಮುಂಬರುವ ದಶಕಗಳಲ್ಲಿ ಇಸ್ರೇಲ್‌ನ ಇತರೆ ಶತ್ರುಗಳು ನೆನಪಿನಲ್ಲಿಟ್ಟುಕೊಳ್ಳುವಂತಹ ಬೆಲೆಯನ್ನೇ ಹಮಾಸ್ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಕ್ಕಳು, ಮಹಿಳೆಯರು ಸೇರಿದಂತೆ ಇಸ್ರೇಲ್ ಜನರನ್ನು ಒತ್ತೆಯಾಳುಗಳಾಗಿ ಇರಿಸಿ ಚಿತ್ರಹಿಂಸೆ ನೀಡಿ ಹತ್ಯೆಗೈಯುತ್ತಿರುವ ಹಮಾಸ್ ಬಂಡುಕೋರರನ್ನು ಐಸಿಸ್ ಉಗ್ರ ಸಂಘಟನೆಯೊಂದಿಗೆ ನೆತನ್ಯಾಹು ಹೋಲಿಸಿದ್ದಾರೆ.
ಐಸಿಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಒಗ್ಗೂಡಿದಂತೆ ಹಮಾಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಮತ್ತೆ ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.