ನವದೆಹಲಿ: ದೆಹಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ಬೆಳೆ ತ್ಯಾಜ್ಯವನ್ನೇ ಬಳಸಿ ಜೈವಿಕ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸೋಮವಾರ ದೆಹಲಿಯಲ್ಲಿ ನಡೆದ ಸ್ಟೆಮ್ ಶೃಂಗಸಭೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ ಅವರು, 'ಎಮಿಷನ್ ಎಕಾನಮಿ 5 ಲಕ್ಷ ಕೋಟಿ ರೂ ಗಳಿಕೆ ಏರಿಕೆಯಾಗಬಹುದು. ದೆಹಲಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ಬೆಳೆ ತ್ಯಾಜ್ಯವನ್ನೇ ಬಳಸಿ ಜೈವಿಕ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ತಯಾರಿಸಲಾಗುತ್ತಿದೆ ಎಂದರು.
ಅಂತೆಯೇ ಆರ್ಗಾನಿಕ್ ಗೊಬ್ಬರಗಳು ತಯಾರಾಗುತ್ತಿದೆ. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧಡೆ ಇಂತಹ 36 ದೇಶದಲ್ಲಿ ತಲೆ ಎತ್ತಿವೆ. ನಾನೂ ಕೂಡ ಇಂತಹ ಒಂದು ಘಟಕ ಆರಂಭಿಸಿದ್ದೇನೆ. ಅಂತೆಯೇ ಇಂತಹ 186 ಘಟಕಗಳು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಅಂತೆಯೇ ಶೀಘ್ರದಲ್ಲೇ ಎಲ್ಲ ಗ್ರಾಮಗಳಲ್ಲೂ ಜೈವಿಕ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಘಟಕಗಳು ತಲೆ ಎತ್ತಲಿವೆ. ಹೀಗಾದಾಗ ದೇಶದಲ್ಲಿ ಪೆಟ್ರೋಲ್-ಡೀಸೆಲ್ ನ ಅಗತ್ಯವೇ ಬೀಳುವುದಿಲ್ಲ. ಪಾಣಿಪತ್ ನಲ್ಲಿರುವ ಇಂಡಿಯನ್ ಆಯಿಲ್ ಘಟಕದವರು ಒಂದು ಲಕ್ಷ ಲೀಟರ್ ಎಥೆನಾಲ್, 150 ಟನ್ ಬಯೋ ವಿಟಮಿನ್, ಬಯೋ ಎವಿಯೇಷನ್ ಫ್ಯೂಲ್ ತಯಾರಿಸುತ್ತಿದ್ದಾರೆ. ಶೇ.10ರಷ್ಟು ಜೈವಿಕ ಇಂಧನವನ್ನು ವಿಮಾನಗಳಲ್ಲಿ ಬಳಕೆ ಮಾಡುವ ಗುರಿ ಹೊಂದಿದ್ದಾರೆ.
ಆ ಮೂಲಕ ನಮ್ಮ ರೈತ ಈಗ ಕೇವಲ ಅನ್ನಧಾತನಾಗಿ ಮಾತ್ರ ಉಳಿದಿಲ್ಲ. ಇಂಧನ ಸರಬರಾಜುದಾರನಾಗಿ, ವಿಟಮಿನ್ ದಾರನಾಗಿ, ವಿಮಾನ ಇಂಧನ ಪೂರೈಕೆದಾರನಾಗಿಯೂ ಕೂಡ ಬದಲಾಗುತ್ತಿದ್ದಾನೆ. ಹೀಗಿರುವಾಗ ರೈತನೇಕೆ ಬಡವನಾಗಿ ಉಳಿಯುತ್ತಾನೆ. ನಾನು ಹೇಳುವುದೇನೆಂದೆರ ಈ ಸಂಬಂಧ ಎಲ್ಲ ರೀತಿಯ ಸಂಶೋಧನೆಗಳಾಗಬೇಕು. ಆಗಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಗಡ್ಕರಿ ಹೇಳಿದರು.