ಜೆರುಸಲೇಂ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಯುದ್ಧದ ಬೆನ್ನಲೇ ಗಾಜಾಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮಾಡಲು ಮುಂದಾಗಿದೆ.
ಈ ನಡುವೆ ಗಾಜಾಪಟ್ಟಿಯಲ್ಲಿರುವ ಸುರಂಗ ಮಾರ್ಗಗಳು ಇಸ್ರೇಲ್ ಭೂಸೇನೆ ಸವಾಲು ಒಡ್ಡಲಿವೆ ಎಂದು ಪ್ಯಾಲೆಸ್ಟೀನ್ ಮೂಲಗಳು ತಿಳಿಸಿವೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಗಾಜಾಪಟ್ಟಿ ಕಿರು ಭೂಪ್ರದೇಶವಾಗಿದೆ. ಈ ನಗರದಲ್ಲಿ ಹೆಚ್ಚಾಗಿ ಕಿರಿದಾದ ರಸ್ತೆಗಳಿದ್ದು, 500 ಕೀ.ಮೀಟರ್‌ನಷ್ಟು ಸುರಂಗ ಸಂಪರ್ಕ ಜಾಲವಿದೆ ಎಂದು ಪ್ಯಾಲೆಸ್ಟೀನ್ ಮೂಲಗಳು ತಿಳಿಸಿವೆ. ಇಲ್ಲಿನ ಜನರು ಈ ಸುರಂಗ ಮಾರ್ಗಗಳನ್ನು ಸಂಪರ್ಕಕ್ಕೆ ಬಳಸುತ್ತಾರೆ ಎಂದು ಹಮಾಸ್ ನಾಯಕ ಯಾಹ್ಯಾ ಸಿನ್‌ವಾರ್ ಹೇಳಿದ್ದಾರೆ.
2021ರಲ್ಲಿ ಇಸ್ರೇಲ್ ಭದ್ರತಾ ಪಡೆಗಳು ಸುಮಾರು 100 ಕಿ.ಮೀಟರ್ ಮಾರ್ಗದ ಸುರಂಗ ಸಂಪರ್ಕ ವ್ಯವಸ್ಥೆಯನ್ನು ನಾಶ ಮಾಡಿದ್ದರು. ಇದನ್ನು ಒಪ್ಪಿಕೊಂಡಿರುವ ಯಾಹ್ಯಾ ಸಿನ್‌ವಾರ್, ಇಲ್ಲಿ ಇನ್ನು ಸಾಕಷ್ಟು ಸುರಂಗ ಮಾರ್ಗಗಳಿವೆ ಎಂದು ಹೇಳಿದ್ದಾರೆ.
ಒಂದು ವೇಳೆ ಇಸ್ರೇಲ್ ಭೂಸೇನೆ ಗಾಜಾಪಟ್ಟಿ ಮೇಲೆ ದಾಳಿಗೆ ಮುಂದಾದರೆ ಈ ಸುರಂಗ ಮಾರ್ಗಗಳು ಸವಾಲು ಒಡ್ಡಲಿವೆ ಎಂದು ಯಾಹ್ಯಾ ಸಿನ್‌ವಾರ್ ಹೇಳಿದ್ದಾರೆ.
ಈಗಾಗಲೇ ಗಾಜಾಪಟ್ಟಿಯ ನಾಗರೀಕರಿಗೆ 2 ದಿನಗಳಲ್ಲಿ ಸ್ಥಳ ಖಾಲಿ ಮಾಡುವಂತೆ ಇಸ್ರೇಲ್ ಸರ್ಕಾರ ಸೂಚನೆ ನೀಡಿದೆ. ಇಲ್ಲಿಗೆ ನೀರು ಮತ್ತು ವಿದ್ಯುತ್ ಸರಬರಾಜು ಸಂಪರ್ಕವನ್ನು ಇಸ್ರೇಲ್ ಕಡಿತ ಮಾಡಿದೆ.