ತಿರುವನಂತಪುರಂ: ಯಾವುದೇ ರೀತಿಯ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಲು, ಅರ್ಜಿಯ ಜೊತೆಗೆ ಕೇವಲ ಎರಡು ದಾಖಲೆಗಳು ಬೇಕಾಗುತ್ತವೆ. ಅರ್ಜಿದಾರರ ಗುರುತಿನ ದಾಖಲೆ ಮತ್ತು ವಿದ್ಯುತ್ ಸಂಪರ್ಕವನ್ನು ಪಡೆಯುವ ಸ್ಥಳಕ್ಕೆ ಅರ್ಜಿದಾರರ ಕಾನೂನು ಹಕ್ಕನ್ನು ಸಾಬೀತುಪಡಿಸುವ ದಾಖಲೆ ಮಾತ್ರ ಸಾಕು ಎಂದು ಕೇರಳ ವಿದ್ಯುತ್ ಪ್ರಸರಣ ನಿಗಮ ನಿನ್ನೆ ಪ್ರಕಟಿಸಿದ ಸೂಚನೆಯಲ್ಲಿ ತಿಳಿಸಿದೆ.
ಹೊಸ ಸೇವಾ ಸಂಪರ್ಕ ಪ್ರಕ್ರಿಯೆಗಳನ್ನು ಕ್ರೋಢೀಕರಿಸಲು ಕೆಎಸ್‍ಇಬಿ ಹೊಸ ನಿರ್ಧಾರಕ್ಕೆ ಬಂದಿದೆ. 2ನೇ ನವೆಂಬರ್ 2018 ರಂದು ಕೆ.ಎಸ್.ಇ.ಬಿ. ಲಿಮಿಟೆಡ್ ಹೊರಡಿಸಿದ ಪ್ರಮುಖ ಆದೇಶ (ಬಿ.ಒ.(ಎಫ್.ಟಿ.ಡಿ)ಸಂ. 1902/2018(ಡಿ(ಡಿ&ಐಟಿ)/ಡಿ-6-ಎಇ 3/Ease of doing business/2018-19) ಜಣಜ, 02.11.2018 ಕೆ.ಎಸ್.ಇಬಿ ಪ್ರಕಾರ, ಟಿವಿಪಿಎಂ ಅಡಿಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಗರಿಷ್ಠ ಸಂಖ್ಯೆಯನ್ನು ಎರಡಕ್ಕೆ ನಿಗದಿಪಡಿಸಲಾಗಿದೆ.
ಮೊದಲನೆಯದು ಅರ್ಜಿದಾರರ ಗುರುತಿನ ದಾಖಲೆ ಮತ್ತು ಎರಡನೆಯದು ವಿದ್ಯುತ್ ಸಂಪರ್ಕವನ್ನು ಪಡೆಯುವ ಸ್ಥಳಕ್ಕೆ ಅರ್ಜಿದಾರರ ಕಾನೂನು ಹಕ್ಕನ್ನು ಸಾಬೀತುಪಡಿಸುವ ದಾಖಲೆಯಾಗಿದೆ. ಗುರುತಿನ ಪುರಾವೆಯಾಗಿ ಚುನಾವಣಾ ಗುರುತಿನ ಚೀಟಿ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಸರ್ಕಾರ / ಏಜೆನ್ಸಿ / ಸಾರ್ವಜನಿಕ ವಲಯದ ಯುಟಿಲಿಟಿ ಪೋಟೋಗ್ರಾಫಿಕ್ ಕಾರ್ಡ್, ಪ್ಯಾನ್, ಆಧಾರ್, ಪೋಟೋಗ್ರಾಫಿಕ್ ಗುರುತಿನ ಪ್ರಮಾಣಪತ್ರದ ಯಾವುದೇ ಒಂದು ಗುರುತಿನ ಪುರಾವೆಯಾಗಿ ಅಗತ್ಯವಿದೆ.
ಕಟ್ಟಡದ ಮಾಲೀಕತ್ವದ ಪ್ರಮಾಣಪತ್ರ, ಆವರಣದ ಸ್ವಾಧೀನ/ಮಾಲೀಕತ್ವ, ಆಧಾರ್‍ನ ದೃಢೀಕೃತ ಪ್ರತಿ (ಯಾವುದೇ ಗಸ್ಟೆಡ್ ಅಧಿಕಾರಿ / ಕೆಎಸ್‍ಇಬಿಎಲ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ), ಪ್ರಸ್ತುತ ವರ್ಷದ ತೀರ್ವೆ ಕಟ್ಟಿದ ರಸೀದಿಯ ಪ್ರತಿ, ಹಿಡುವಳಿದಾರನಾಗಿದ್ದರೆ ಬಾಡಿಗೆ ಒಪ್ಪಂದದ ಪ್ರತಿ ಮತ್ತು ಮೇಲಿನ ಯಾವುದೇ ಒಂದು ದಾಖಲೆ, ಬಾಡಿಗೆದಾರ ಆವರಣದ ಮೇಲೆ ಅರ್ಜಿದಾರರ ಕಾನೂನು ಹಕ್ಕನ್ನು ಸಾಬೀತುಪಡಿಸಲು ನಗರಸಭೆ, ಕಾರ್ಪೋರೇಷನ್ ಅಥವಾ ಪಂಚಾಯತ್‍ನಿಂದ ಕೆಎಸ್‍ಇಬಿ ಯಾವುದೇ ಒಂದು ಪ್ರಮಾಣಪತ್ರವನ್ನು ಕೇಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.