ಜೆರುಸಲೇಂ: ಗಾಜಾದಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆಯೊಬ್ಬರು ಕೂಡಲೇ ತನ್ನ ಕುಟುಂಬವನ್ನು ಸ್ಥಳಾಂತರಿಸುವಂತೆ ಸುದ್ದಿಸಂಸ್ಥೆ ಮೂಲಕ ಮನವಿ ಮಾಡಿದ್ದಾರೆ.
ಜೆರುಸಲೇಂ: ಗಾಜಾದಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆಯೊಬ್ಬರು ಕೂಡಲೇ ತನ್ನ ಕುಟುಂಬವನ್ನು ಸ್ಥಳಾಂತರಿಸುವಂತೆ ಸುದ್ದಿಸಂಸ್ಥೆ ಮೂಲಕ ಮನವಿ ಮಾಡಿದ್ದಾರೆ.
'ಇಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಕ್ಷಣಮಾತ್ರದಲ್ಲಿ ಎಲ್ಲವೂ ಧ್ವಂಸವಾಗುತ್ತಿವೆ. ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಕಾರಣ ನಾವು ಬೆಲೆ ತೆರುತ್ತಿದ್ದೇವೆ' ಎಂದು ಜಮ್ಮು ಮತ್ತು ಕಾಶ್ಮೀರ ಮೂಲದ ಲುಬ್ನಾ ನಾಝಿರ್ ಶಾಬೂ ಅವರು ಪಿಟಿಐ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ಹೇಳಿದ್ದಾರೆ.