ಕಾಸರಗೋಡು: ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದಲ್ಲಿ ಭವಿಷ್ಯದಲ್ಲಿ ಉಂಟಾಗುವ ಕೋನ್ಫಿಡೆನ್ಶಿಯಲ್ ಅಸಿಸ್ಟೆಂಟ್ ಗ್ರೇಡ್ ಟಟ, ಕಂಪ್ಯೂಟರ್ ಅಸಿಸ್ಟೆಂಟ್ ಯಾ ಎಲ್.ಡಿ ಟೈಪಿಸ್ಟ್, ಆಫೀಸ್ ಅಟೆಂಡೆಂಟ್ ಯಾ ಪ್ಯೂನ್ (ಪಿ.ಎಸ್.ಸಿ ನಿರ್ದೇಶಿಸಿದ ಅರ್ಹತೆ ಮತ್ತು ಐದು ವರ್ಷಗಳ ಕೆಲಸದ ಅನುಭವ) ಎಂಬೀ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಅರ್ಹ, ನಿವೃತ್ತಿ ಹೊಂದಿದ ನ್ಯಾಯಲಯದ ನೌಕರರಿಂದ ಮತ್ತು ಸರ್ಕಾರಿ ನೌಕರರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಯಿರುವ ಅಭ್ಯರ್ಥಿಗಳು ವಯಸ್ಸು, ವಿದ್ಯಾರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ನಮೂನೆಯಲ್ಲಿರುವ ಅರ್ಜಿಗಳನ್ನು ಜಿಲ್ಲಾ ಜಡ್ಜ್, ಜಿಲ್ಲಾ ನ್ಯಾಯಾಲಯ, ಕಾಸರಗೋಡು - 671123 ಎಂಬ ವಿಳಾಸಕ್ಕೆ ಕಳುಹಿಸಿಕೊಡಬೇಕು. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://kasaragod.dcourts.gov.in ಸಂದರ್ಶಿಸುವಂತೆ ಪ್ರಕಟಣೆ ತಿಳಿಸಿದೆ.