ಮಧೂರು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ತಿಕ ದೀಪೆÇೀತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಅವರು ಆಮಂತ್ರಣ ಪತ್ರಿಕೆ ಶ್ರೀದೇವರ ನಡೆಯಲ್ಲಿಟ್ಟು ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ದೇವಸ್ಥಾನದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಸೀನ ಶೆಟ್ಟಿ ಕಾರ್ತಿಕ ದೀಪೋತ್ಸವದ ಸಮಗ್ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗಣೇಶ್ ಭಂಡಾರಿ ನಡುಮನೆ,ಕೃಷ್ಣಶೆಟ್ಟಿ ಬೇರ, ಕುಮಾರ್ ಕೆಎಲ್, ಗಣೇಶ್ ಶೆಟ್ಟಿ ಹಳೆಮನೆ, ರವೀಂದ್ರ ರೈ ಪಾರೆಹಿತ್ಲು, ಉಮೇಶ್ ಶೆಟ್ಟಿ ಪಾಲ್ತೋಡ್, ನಿತೀಶ್ ಆಳ್ವ ಪುಳ್ಕೂರು,ಭಾಸ್ಕರ ಶೆಟ್ಟಿ ಅಡ್ಕ, ಕರುಣಾಕರ ಶೆಟ್ಟಿ ಫುಳ್ಕೂರು, ಜಗದೀಶ್ ಆಳ್ವ ಹಳೆಮನೆ, ಚಂದ್ರಹಾಸ ಶೆಟ್ಟಿ ಓಡಾರಿ ಹಿತ್ತಲು, ಬಾಲಕೃಷ್ಣ ಶೆಟ್ಟಿ ಉಡುವ, ಚಂದ್ರಹಾಸ ಶೆಟ್ಟಿ ಪುಳ್ಕೂರು ಚಂದಶೇಖರ ನೀರಾಳ, ಮಹೇಶ್ ಶೆಟ್ಟಿ ಪಾಲ್ತೋಡ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನ. 14ರಿಂದ ಡಿ. 13ರ ವರೆಗೆ ಕಾರ್ತಿಕ ದೀಪೋತ್ಸವ ನಡೆಯಲಿರುವುದು. ನ. 14ರಂದು ಭಜನೆ ಹಾಗೂ ಬಲಿವಾಡು ಕೂಟದೊಂದಿಗೆ ಕಾರ್ತಿಕ ದೀಪೋತ್ಸವಕ್ಕ ಚಾಲನೆ ನೀಡಲಾಗುವುದು. ಪ್ರತಿದಿನ ರಾತ್ರಿ 7.30ಕ್ಕೆ ಆಹ್ವಾನಿತ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಶಿವ ಪಂಚಾಕ್ಷರಿ ಮಂತ್ರದೊಂದಿಗೆ ಮಹಾಮಂಗಳಾರತಿ ನಡೆಯುವುದು.