ನವದೆಹಲಿ: ಭಾರತ ಕ್ರಿಕೆಟ್ ಆಟಗಾರ ಶಿಖರ್ ಧವನ್ ಅವರು ಪತ್ನಿ ಆಯೇಷಾಗೆ ವಿಚ್ಛೇದನ ನೀಡಿದ್ದಾರೆ.
ವಿಚಾರಣೆ ನಡೆಸಿದ ದೆಹಲಿಯ ಕೌಟುಂಬಿಕ ನ್ಯಾಯಾಲಯವು, ಪತ್ನಿಯಿಂದ ಮಾನಸಿಕ ಹಿಂಸೆಗೆ ಗುರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ಧವನ್‌ಗೆ ವಿಚ್ಛೇದನ ಮಂಜೂರು ಮಾಡಿದೆ.
ಶಿಖರ್ ಧವನ್ ಅವರು ಮಾಡಿದ್ದ ಆರೋಪಗಳನ್ನು ಆಯೇಷಾ ಅವರು ಸಮರ್ಥನೆ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿ ಪತ್ನಿ ಧವನ್‌ರನ್ನು ಮಾನಸಿಕತೆಗೆ ಒಳಪಡಿಸಿದ್ದಾರೆ ಎಂದು ನ್ಯಾಯಾಧೀಶ ಹರೀಶ್ ಕುಮಾರ್ ಅವರು ಪರಿಗಣಿಸಿ ವಿಚ್ಛೇದನಕ್ಕೆ ಅನುಮೋದಿಸಿದ್ದಾರೆ.
ಮಗನ ಕಾಯಂ ಕಸ್ಟಡಿಗೆ ಸಂಬಂಧಿಸಿ ಆದೇಶ ನೀಡಲು ನಿರಾಕರಿಸಿದ ನ್ಯಾಯಾಲಯವು ಧವನ್ ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆಯಲ್ಲಿ ಮಾತನಾಡುವ ಹಕ್ಕನ್ನು ನೀಡಿದೆ. ಆಯೇಷಾ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
2012ರಲ್ಲಿ ಆಯೇಷಾ ಮತ್ತು ಧವನ್ ಮದುವೆಯಾಗಿದ್ದರು, ಆಯೇಷಾಗೆ ಎರಡನೇ ಮದುವೆಯಾಗಿತ್ತು.