HEALTH TIPS

ಕೂಟಬಂಧು ಕುಟುಂಬ ಸಂಗಮ: ಪೂರ್ವ ಭಾವಿ ಸಭೆ

                      

                  ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ದೇಶಮಂಗಲ,  ಉಡುವ,  ಬೆದ್ರಡ್ಕ,  ಉಜಿರೆಕೆರೆ,  ಸಿರಿಬಾಗಿಲು ಪ್ರದೇಶದ ಕೂಟಬಂಧು ಸಮಾಜ  ಬಾಂಧವರು  ಮತ್ತು  ಬಂಧುಗಳು ಸದಸ್ಯರಾಗಿರುವ   ಶಿವನಾರಾಯಣ ಗೆಳೆಯರ ವಾಟ್ಸಪ್ ಬಳಗದ ವತಿಯಿಂದ ಇದೇ ಅ. 29 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ  ಜರಗಲಿರುವ 'ಕುಟುಂಬ ಸಂಗಮ' ಕಾರ್ಯಕ್ರಮದ ಪೂರ್ವ ಭಾವಿ ಸಭೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾತನಾಡಿ, ಇಂತಹ ಕಾರ್ಯಕ್ರಮವು ಸ್ಥಳೀಯ ಕೂಟ ಸಮಾಜದ ಮನೆ ಮನಗಳಲ್ಲಿ ಸಹಕಾರ, ಏಕತಾ ಮನೋಭಾವಕ್ಕೆ ಪೂರಕವಾಗುತ್ತದೆ. ಕೂಟಬಂಧು ಸಿರಿಬಾಗಿಲು ವೆಂಕಪ್ಪಯ್ಯ ನವರ ಹೆಸರಿನ ಸಾಂಸ್ಕೃತಿಕ ಭವನ ಮುಂದಿನ ದಿನಗಳಲ್ಲಿ ಇನ್ನೂ  ಹೆಚ್ಚು ಬೆಳಗುವಂತಾಗಲು ಇಂತಹ ಕಾರ್ಯಕ್ರಮ ಅಗತ್ಯ. ಮುಖ್ಯವಾಗಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯತತ್ಪರರಾಗಬೇಕು. ಕಲೆ-ಸಂಸ್ಕೃತಿ ಮುಂದಿನ ದಿನಗಳಲ್ಲಿ ಯುವ ತಲೆಮಾರಿಗೆ ಹಸ್ತಾಂತರವಾಗಬೇಕು. ನಮ್ಮ ಈ ಪರಿಸರದಲ್ಲಿ ಹಿಂದಿನ ತಲೆಮಾರಿನ ಬನ್ನೂರು ನಾರಾಯಣ ಭಾಗವತರು, ಬನ್ನೂರು ವೆಂಕಣ್ಣ, ಪುತ್ತಿಗೆ ಜೋಯಿಸರು ದೇಶಮಂಗಲ ಕೃಷ್ಣ ಕಾರಂತ, ಉಡುವಣ್ಣಾಯರು, ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾದವರು ಕಲೆ- ಸಂಸ್ಕೃತಿಗೆ ಅಪಾರ ಕೊಡುಗೆ ಇತ್ತವರು ಎಂದು ನೆನಪಿಸಿದರು. 

               ದೇಶಮಂಗಲ ಶಂಕರನಾರಾಯಣ ಕುಟ್ಟಿಚ್ಚಾತ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಕಾರಂತ  ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭ ಹಾರೈಸಿದರು. ವೆಂಕಟರಮಣ ಹೊಳ್ಳ ನೀರಾಳ, ಶಂಕರನಾರಾಯಣ ಮಯ್ಯ  ನೀರಾಳ  ಶುಭಾಶಂಸನೆಗೈದರು. ಶಿವನಾರಾಯಣ ವಾಟ್ಸಪ್ ಬಳಗದ ಅಡ್ಮಿನ್,ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದ ಅರ್ಚಕ  ಪ್ರಭಾಕರ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಗದಿಯಾದ ಕಾರ್ಯಕ್ರಮದ ದಿನದಂದು ಗಣಪತಿ ಹವನ, ಸಭಾ ಕಾರ್ಯಕ್ರಮ, ಹಿರಿಯರು ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ , ಪ್ರತಿಭಾ ಪ್ರದರ್ಶನ, ಗಣ್ಯರಿಗೆ ಸನ್ಮಾನ, ಸಭಾ ಕಾರ್ಯಕ್ರಮ ನಡೆಯಲಿರುವುದು. ಪ್ರಶಾಂತ ಹೊಳ್ಳ ನೀರಾಳ ನಿರೂಪಿಸಿದರು.  ಪ್ರಸನ್ನ  ಕಾರಂತ  ದೇಶಮಂಗಲ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries