ತಿರುವನಂತಪುರಂ: ತಿರುವನಂತಪುರ ಜಿಲ್ಲೆಯಲ್ಲಿ ಪ್ರಾಣಿಗಳಿಂದ ಹರಡುವ ಬ್ರೂಸೆಲೋಸಿಸ್ ರೋಗ ದೃಢಪಟ್ಟಿದೆ. ವೆಂಬಯಂ ವೆಟಿನಾಡ್‍ನ ತಂದೆ ಮತ್ತು ಮಗನಿಗೆ ಈ ರೋಗ ದೃಢಪಟ್ಟಿದೆ.
ಜಾನುವಾರುಗಳಿಂದ ರೋಗ ಹರಡಿದೆ ಎಂಬುದು ಪ್ರಾಥಮಿಕ ತೀರ್ಮಾನ. ರೋಗ ಹರಡದಂತೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಸೋಂಕಿತ ವ್ಯಕ್ತಿಗಳನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿನ ಜಾನುವಾರುಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲು ಪ್ರಾಣಿ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಇನ್ನಷ್ಟು ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಬ್ರೂಸೆಲೋಸಿಸ್ ಮಾರಣಾಂತಿಕ ಕಾಯಿಲೆಯಾಗಿದೆ. ಈ ಮೊದಲು ಕೇರಳದಲ್ಲಿ ಬ್ರೂಸೆಲೋಸಿಸ್ ದೃಢಪಟ್ಟಿದೆ. ಕಳೆದ ಜುಲೈನಲ್ಲಿ ಕೊಲ್ಲಂ ಜಿಲ್ಲೆಯ ಕಡೈಕಲ್‍ನಲ್ಲಿ ಏಳು ವರ್ಷದ ಬಾಲಕಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿತ್ತು.