ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ನವರಾತ್ರೋತ್ಸವ ಭಾನುವಾರ (ಅ.15) ದಂದು ದೇವರಿಗೆ ಪಂಚಾಮೃತಾಭಿಷೇಕ, ಗಣಹೋಮದೊಂದಿಗೆ ಆರಂಭವಾಗಲಿದೆ. ಸಂಜೆ 6.ಕ್ಕೆ ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿದ ಕೇರಳದ ಪ್ರಸಿದ್ಧ ಗಾಯಕ ತ್ರಿಶೂರ್ ನ ಪ್ರಶಾಂತ್ ವರ್ಮ ಅವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ಶ್ರೀಮಠದ ಗಾಯತ್ರೀ ಮಂಟಪದಲ್ಲಿ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.