ಪೆರ್ಲ: ಕೇರಳ ಕ್ಷೀರಾಭಿವೃದ್ಧಿ ಇಲಾಖೆ ಹಾಗೂ ಮಂಜೇಶ್ವರ ಬ್ಲಾಕ್ ನ ಕ್ಷೀರಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರ ಬ್ಲಾಕ್ ಕ್ಷೀರ ಕೃಷಿಕರ ಸಂಗಮ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಆಡಿಟೋರಿಯಂನಲ್ಲಿ ಜರಗಿತು.
ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷೆ ಶಮೀನ ಟೀಚರ್ ಸಮಾರಂಭ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ಷೀರೋದ್ಯಮದ ಅಭಿವೃದ್ಧಿಗಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕಟಿಬದ್ಧವಾಗಿದೆ.ಹೈನುಗಾರಿಕೆ ಮಾಡುವ ರೈತರ ಕ್ಷೇಮಾಭಿವೃದ್ಧಿ ಮತ್ತು ಆರ್ಥಿಕ ಸ್ಥಿತಿಯ ಅನುಕೂಲಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಹಾಲು ಮತ್ತು ಹಾಲಿನ ಇತರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕ್ಷೀರ ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂ.ಉಪಾಧ್ಯಕ್ಷ ಪಿ.ಕೆ.ಮುಹಮ್ಮದ್ ಹನೀಫ್ ವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್ ಪುತ್ತಿಗೆ ಗ್ರಾಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಕಾಸರಗೋಡು ಜಿ.ಪಂ.ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಎಂ.ಆರ್.ಸಿ.ಎಂ.ಪಿ.ಯು.ಬೋರ್ಡ್ ಸದಸ್ಯ ನಾರಾಯಣನ್ ಪಿ.ಪಿ,. ಕೆ.ಡಿ.ಎಫ್.ಡಬ್ಲ್ಯು.ಎಫ್. ಸದಸ್ಯ, ಎಂ.ಆರ್.ಸಿ.ಎಂ.ಪಿ.ಯು.ಬೋರ್ಡ್ ಸದಸ್ಯ ಸುಧಾಕರನ್ ಕೆ., ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಕೆ.ಬಟ್ಟು ಶೆಟ್ಟಿ, ಕೆ.ಪಿ. ಅನಿಲ್ ಕುಮಾರ್, ವಾರ್ಡ್ ಸದಸ್ಯ ರಾಮಚಂದ್ರ ಎಂ., ಎಸ್.ಬಿ. ನರಸಿಂಹ ಪೂಜಾರಿ ಶುಭ ಹಾರೈಸಿದರು.
ಬ್ಲಾಕ್ ಮಟ್ಟದ ವಿವಿಧ ಕ್ಷೀರ ಸಂಘಗಳ ಅಧ್ಯಕ್ಷರು, ಪಡ್ರೆ ಶಾಲಾ ಮುಖ್ಯ ಶಿಕ್ಷಕ ವಾಸುದೇವ ನಾಯಕ್, ಕ್ಷೀರಾಭಿವೃದ್ಧಿ ಇಲಾಖೆ, ಕಾಸರಗೋಡು ಸಹಾಯಕ ನಿರ್ದೇಶಕ ಸಿಜೋನ್ ಜೋನ್ಸನ್ ಕುನ್ನತ್ತ್, ಮಂಜೇಶ್ವರ ಬ್ಲಾಕ್ ಡೈರಿ ಫಾರ್ಮ್ ತರಬೇತುದಾರ ಆತುಲ್ ಟಿ.ಆಗಸ್ಟಿನ್, ಪೆರ್ಲ ಕ್ಷೀರಸಂಘದ ಕಾರ್ಯದರ್ಶಿ ಕೆ.ಚೇತನ , ಪಡ್ರೆ ಹಾಲುತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ರವಿ ಕೆ.ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಷೀರೋತ್ಪಾದನೆಯಲ್ಲಿ ಸಾಧನೆಗೈದವರನ್ನು ಹಾಗೂ ಸೇವಾ ನಿವೃತ್ತರನ್ನು ಗೌರವಿಸಲಾಯಿತು.
ಪಡ್ರೆ ಕ್ಷೀರ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಾಲಕೃಷ್ಣ ನಾಯ್ಕ್ ಸ್ವಾಗತಿಸಿ, ಮಂಜೇಶ್ವರ ಕ್ಷೀರಾಭಿವೃದ್ಧಿ ಅಧಿಕಾರಿ ಅಜಯನ್ ಎಸ್.ವಂದಿಸಿದರು. ದೈಹಿಕ ಶಿಕ್ಷಕ ಸುಧೀರ್ ಪಿ.ಎಸ್.ನಿರೂಪಿಸಿದರು.