ಚಿತ್ರಕೂಟ(PTI): ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಶೀಘ್ರವೇ ಸಿದ್ಧಗೊಳ್ಳಲಿದೆ. ಉದ್ಘಾಟನೆಯು ಮುಂದಿನ ಜನವರಿ 22ರಂದು ನಡೆಯುವ ನಿರೀಕ್ಷೆ ಇದ್ದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದವರು ಈಗಾಗಲೇ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಯೂ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಗದ್ಗುರು ರಾಮ್‌ಭದ್ರಾಚಾರ್ಯ ಅವರ ತುಳಸಿಪೀಠದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ಜಗದ್ಗುರು ರಾಮ್‌ಭದ್ರಾಚಾರ್ಯ ಅವರು ಕೊಡಗೆಯನ್ನು ಸ್ಮರಿಸಿದರು. ಸಂಸ್ಕೃತವು ಸಂಪ್ರದಾಯದ ಭಾಷೆ ಅಷ್ಟೇ ಅಲ್ಲ, ಅದು ನಮ್ಮ ಪ್ರಗತಿ ಮತ್ತು ಗುರುತು ಎಂದರು.
ಇದೇ ಸಂದರ್ಭದಲ್ಲಿ ಅವರು ಜಗದ್ಗುರು ರಾಮ್‌ಭದ್ರಾಚಾರ್ಯ ಅವರು ಬರೆದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಅಂಚೆ ಚೀಟಿ ಬಿಡುಗಡೆ: ಉದ್ಯಮಿ ಮತ್ತು ದಾನಿ ದಿ. ಅರವಿಂದ್ ಭಾಯಿ ಮಫತ್‌ಲಾಲ್ ಅವರ ಗೌರವಾರ್ಥ ವಿಶೇಷ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಿ ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮಫತ್‌ಲಾಲ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.