ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ಗಾಂಧಿ ಜಯಂತಿ ಆಚರಣೆ ಪರಿಸರ ಶುಚೀಕರಣ ಚಟುವಟಿಕೆಯೊಂದಿಗೆ ನಡೆಯಿತು. ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷ ಜೀನ್ ಲವೀನೊ ಮೊಂತೇರೊ ಉದ್ಘಾಟಿಸಿದರು.
ಹಿರಿಯ ಸಾಹಿತಿ ಪ್ರೊ.ಕೃಷ್ಣ ಭಟ್, ಲೇಖಕ ನರೇಂದ್ರ ರೈ ದೇರ್ಲ, ದೇವಿಕಾ ಪಿ.ಕೆ. ಮಾತನಾಡಿದರು. ವಿಜಯಕುಮಾರ್ ಪಾವಳ, ಜಯಂತ ಮಾಸ್ತರ್, ಕಮಲಾಕ್ಷ ಕನಿಲ, ಮೊದಲಾದವರು ಉಪಸ್ಥಿತರಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್ ಸ್ವಾಗತಿಸಿ, ಖಜಾಂಜಿ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಶುಚೀಕರಣದಲ್ಲಿ ಭಾಗವಹಿಸಿದ್ದರು.