ತಿರುವನಂತಪುರಂ: ವರದಿಗಳ ಪ್ರಕಾರ ಕೇರಳ ಪೋಲೀಸರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅತಿಯಾದ ಕೆಲಸದ ಹೊರೆ ಮತ್ತು ಮಾನಸಿಕ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವರದಿ ಬೊಟ್ಟುಮಾಡಿದೆ.
ವರ್ಷಕ್ಕೆ ಸರಾಸರಿ ಮೂವತ್ತಕ್ಕೂ ಹೆಚ್ಚು ಪೋಲೀಸರು ಮೃತರಾಗುತ್ತಾರೆ ಮತ್ತು ನೂರಕ್ಕೂ ಹೆಚ್ಚು ಪೋಲೀಸರು ನಿವೃತ್ತರಾಗುತ್ತಾರೆ ಎಂಬ ಗುಪ್ತಚರ ಅಂಕಿ ಅಂಶಗಳು ಹೊರಬಿದ್ದಿವೆ.
ಅತಿಯಾದ ಕೆಲಸದ ಹೊರೆ ಹಾಗೂ ಉನ್ನತ ಅಧಿಕಾರಿಗಳ ಒತ್ತಡದಿಂದ ಪೋಲೀಸ್ ಪಡೆಯ ನೈತಿಕ ಸ್ಥೈರ್ಯ ಕುಸಿಯುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 78 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಒತ್ತಡದಿಂದ ಪೋಲೀಸ್ ಕೌನ್ಸೆಲಿಂಗ್ ಸೆಂಟರ್ ಒಂದರಲ್ಲೇ 4 ಸಾವಿರಕ್ಕೂ ಹೆಚ್ಚು ಪೋಲೀಸರು ಚಿಕಿತ್ಸೆ ಪಡೆದಿದ್ದಾರೆ. ಠಾಣೆಗಳಲ್ಲಿ ಸಾಕಷ್ಟು ಸಿಬ್ಬಂದಿಗಳಿಲ್ಲ. ಸುಮಾರು 7000 ಹುದ್ದೆಗಳು ಖಾಲಿ ಇವೆ. 12ರಿಂದ 18 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಬೇಕಾದ ಪೊಲೀಸ್ ಠಾಣೆಗಳಲ್ಲಿ ವಿಶ್ರಾಂತಿ ಕೊಠಡಿಯೂ ಇಲ್ಲ.
ಪ್ರತಿ ಠಾಣೆಯಲ್ಲಿ ಕನಿಷ್ಠ ಹತ್ತು ಮಂದಿ ಪೋಲೀಸರಿಗೆ ಮೇಲಧಿಕಾರಿಗಳ ಅಟ್ಯಾಚ್ ಮೆಂಟ್ ಕೆಲಸ ನೀಡಲಾಗಿದ್ದು, ಮೇಲಧಿಕಾರಿಗಳ ಅಸಭ್ಯತೆಯನ್ನು ಸಹಿಸಬೇಕಾಗುತ್ತದೆ. ಎಫ್‍ಐಆರ್‍ನ ಐದು ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ ಪೋಲೀಸ್ ಠಾಣೆಯಲ್ಲಿ ಇದಕ್ಕೆ ಬೇಕಾದ ಸೌಲಭ್ಯಗಳೂ ಇಲ್ಲ. ರಾತ್ರಿ ಗಸ್ತಿಗೆ ಕನಿಷ್ಠ ನಾಲ್ವರು ಪೋಲೀಸರು ಅಗತ್ಯವಿದ್ದು, ಮರುದಿನ ಕರ್ತವ್ಯಕ್ಕೆ ಪುರುಷರು ಇಲ್ಲದ ಸ್ಥಿತಿಯೂ ಇದೆ. ಇದೇ ವೇಳೆ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದ್ದರೂ ಗೃಹ ಇಲಾಖೆ ಮೌನ ವಹಿಸಿದೆ. ಜಾಗೃತಿ ತರಗತಿ ಹಾಗೂ ಯೋಗ ಮಾಡುವಂತೆ ಸಲಹೆ ನೀಡಿದ್ದು ಅμÉ್ಟ ನಡೆದಿದೆ ಎಂದು ವರದಿ ಹೇಳಿದೆ.