ಪುಣೆ: ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನವೊಂದು ಪತನವಾಗಿದ್ದು, ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೈಲಟ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂಜೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಹಳ್ಳಿಯೊಂದರ ಬಳಿ ಇಬ್ಬರು ಸಿಬ್ಬಂದಿಯಿದ್ದ ತರಬೇತಿ ವಿಮಾನ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಪೈಲಟ್ ಮತ್ತು ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನದಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.
"ರೆಡ್‌ಬರ್ಡ್ ಸಂಸ್ಥೆಗೆ (ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ) ಸೇರಿದ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಟ್‌ಫಾಲ್ ಗ್ರಾಮದ ಬಳಿ ಸಂಜೆ 5 ಗಂಟೆ ಸುಮಾರಿಗೆ ಅಪಘಾತಕ್ಕೀಡಾಯಿತು. ದುರಂತದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಗಳು ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ ಮೋರೆ ಹೇಳಿದರು.
ಅಪಘಾತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ ಮತ್ತು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.