ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಸಮಾರೋಪ ಸಮಾರಂಭದ ಅಂಗವಾಗಿ ಕಾಸರಗೋಡು ಬ್ಲಾಕ್ ಮಟ್ಟದ ಅಮೃತ ಕಲಶ ಯಾತ್ರಾ ಕಾರ್ಯಕ್ರಮ ತಳಂಗರೆ ಮುಸ್ಲಿಂ ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಜರುಗಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ 'ಪಂಚ್ ಪ್ರಾಣ್'ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಸರಗೋಡಿನ ಬ್ಲಾಕ್‍ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣನ್ನು ಒಟ್ಟುಗೂಡಿಸಿ ಶಾಲಾ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕಲಶಕ್ಕೆ ಹಾಕುವ ಮೂಲಕ ಅಮೃತ ಕಲಶ ಯಾತ್ರೆ ನಡೆಸಲಾಯಿತು. ವೀರಮೃತ್ಯು ಪಡೆದ ಸೈನಿಕರ ಗೌರವಾರ್ಥವಾಗಿ ಅಮೃತ ಕಲಶಗಳನ್ನು ಸಂಗ್ರಹಿಸಲಾಗುತ್ತಿದ್ದು, ಇವುಗಳನ್ನು ನೆಹರು ಯುವ ಕೇಂದ್ರ ಮತ್ತು ಯುವ ಕಲ್ಯಾಣ ಸ್ವಯಂಸೇವಕರು ಅಕ್ಟೋಬರ್ 30 ಮತ್ತು 31 ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತಲುಪಿಸುವರು. ದೇಶದ ವಿವಿಧ ಗ್ರಾಮಗಳ ಮಣ್ಣನ್ನು ಬಳಸಿ ದೆಹಲಿಯಲ್ಲಿ ವೀರ ಉದ್ಯಾನವನ್ನು ಸಿದ್ಧಪಡಿಸಲಾಗುವುದು.