ಕಾಸರಗೋಡು: ನಗರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನ ಸೇವಾ ಸಹಯೋಗದೊಂದಿಗೆ ನವರಾತ್ರಿ ಮಹೋತ್ಸವ ಭಾನುವಾರ ಆರಂಭಗೊಂಡಿತು. ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸದ ಪ್ರಥಮ ದಿನದಿಂದ ಮುಕ್ತಾಯದ ವರೆಗೂ ಪ್ರಜ್ವಲಿಸಲಿರುವ ನಂದಾದೀಪವನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ಮಯೂರ ಅಸ್ರ ಬೆಳಗಿಸಿದರು.
ಈ ಸಂದರ್ಭ ಕ್ಷೇತ್ರದ ಪ್ರಮುಖರಾದ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ರಾಮ ಪ್ರಸಾದ್, ಕೆ.ಎನ್. ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್, ರವಿ ಕೇಸರಿ, ಗೋಪಾಲ್ ಭಟ್, ಹರೀಶ ಕೆ.ಆರ್. ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ನಾವಡ ಹಾಗೂ ಆಸ್ತಿಕರು ಉಪಸ್ಥಿತರಿದ್ದರು.
ಬೆಳಗ್ಗೆ ಶ್ರೀ ವೆಂಕಟರಮಣ ಬಾಲಗೋಕುಲ ವಿದ್ಯಾರ್ಥಿಗಳಿಂದ ಭಜನೆ, ಮಧ್ಯಾಹ್ನ ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರದ ಆರನೇ ವಾಷಿಕೋತ್ಸವದ ಉದ್ಘಾಟನೆ, ಗೌರವಾರ್ಪಣೆ, ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ 'ವಾಲಿ ಮೋಕ್ಷ-ಇಂದ್ರಜಿತು ಕಾಳಗ'ಯಕ್ಷಗಾನ ಬಯಲಾಟ ಜರುಗಿತು.