ತ್ರಿಶೂರ್: ಮಲಯಾಳಂ ಚಲನಚಿತ್ರ ಗೀತರಚನೆಕಾರ ಮತ್ತು ಜನಪ್ರಿಯ ಜಾನಪದ ಗೀತೆ ಕಲಾ ವಿದ ಅರುಮುಖನ್ ವೆಂಕಿಟ್ ಅಥವಾ ಎನ್.ಎಸ್. ಅರುಮುಖನ್ ನಿಧನರಾದರು. ಅವರನ್ನು 'ಜಾನಪದ ಗೀತೆಗಳ ಸರದಾರ' ಎಂದು ಕರೆಯಲಾಗುತ್ತಿತ್ತು. ತ್ರಿಶೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅರುಮುಖನ್ ಅವರು ಜನಪದ ಗೀತೆಗಳಾದ ಚಾಲಕುಡಿ ಚಂದೆಕ್ಕ ಪೋಗುಂಬೋಳ್, ಮಿನ್ನಾಮಿನುಂಗ್,À್ಪಗಲ್ ಮುಳುವನ್ ಪಣಿಯೆಡುತ್ತು ಮೊದಲಾದ ಹಾಡುಗಳು ಪ್ರಸಿದ್ದವಾಗಿದ್ದು, ಕಲಾಭವನ್ ಮಣಿ ಹಾಡಿ ನಾಡಿನೆಲ್ಲೆಡೆ ಪ್ರಸಿದ್ದವಾಗಿವೆ. ಅರುಮುಖನ್ ಅವರ ಕೃತಿಗಳು. ಕಲಾಭವನ್ ಮಣಿÂಗಾಗಿ ಸುಮಾರು 200 ಹಾಡುಗಳನ್ನು ರಚಿಸಿದ್ದರು. ಎನ್ ಎಸ್ ಅರುಮುಖನ್ ಅಥವಾ ತ್ರಿಶೂರ್ ವೆಂಕಿಟಾಂಗ್ ಅಕ್ಷರ ತೋರಣಗಳ ಮೂಲಕ ಕಟ್ಟಿದ ಜಾನಪದ.ಚಪ್ಪರ ದಕ್ಷಿಣ ಭಾರತದ ಇತರ ಸಾಹಿತ್ಯ ರಚನೆಯ ಮೇಲೂ ಗಾಢ ಪರಿಣಾಮ ಬೀರಿತ್ತು.
‘ಎಳವತ್ತೂರ್ ಕಾಯಲಿನ್’ ಎಂದು ಪ್ರಾರಂಭವಾಗುವ ಮೀಸಮಾಧವನ್ ಚಿತ್ರದ ಆರಂಭಿಕ ಹಾಡು ಅರುಮುಖನ್ ಅವರ ಕೃತಿಯಿಂದ ಹುಟ್ಟಿಕೊಂಡಿದೆ. ಇದಲ್ಲದೆ ಉದಯೋನ್, ಮೀನಾಕ್ಷಿ ಕಲ್ಯಾಣಂ, ಚಂದ್ರೋತ್ಸವಂ ಮೊದಲಾದ ಹಲವು ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮುಲ್ಲಸ್ಸೆರಿಯ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರು ಪತ್ನಿ ಅಮ್ಮಿಣಿ. ಮಕ್ಕಳು: ಸಿನಿ, ಸಿಜು, ಶೈನಿ, ಶೈನ್, ಶಿನೋಯ್, ಕಣ್ಣನ್ ಬಾಲಾಜಿ.ಅವರನ್ನು ಅಗಲಿದ್ದಾರೆ.