ಕಾಸರಗೋಡು: ಹೊಸದಾಗಿ ಬಂದೂಕು ಪರವಾನಗಿ ಪಡೆಯಲು ಇರುವ ಅಡಚಣೆ ನಿವಾರಿಸಲು ಮತ್ತು ನ್ಯಾಯಸಮ್ಮತವಲ್ಲದ ಕಾರಣದಿಂದ ತಿರಸ್ಕøತಗೊಂಡ ಪರವಾನಗಿಗಳ ವಿರುದ್ಧ ವರ್ಷಗಳಿಂದ ಬಾಕಿ ಇರುವ ಮೇಲ್ಮನವಿಗಳಿಗೆ ಶೀಘ್ರ ತೀರ್ಪು ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾಸರಗೋಡು ಜಿಲ್ಲಾ ಪರವಾನಗಿ ಹೊಂದಿರುವ ಬಂದೂಕುಧಾರಿಗಳ ಸಂಘಟನೆ ಒತ್ತಾಯಿಸಿದೆ.
ಶಾಸಕ ಸಿ.ಎಚ್.ಕುಂಞಂಬು ಸಮಾವೇಶ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ನವೀನ್ ಬಾಬು, ಡಿಎಫ್‍ಒ ಅಶ್ರಫ್ ಕೆ, ವಕೀಲ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಂ ರಾಘವನ್ ಕೆ ಪೀತಾಂಬರನ್ ನಾಯರ್, ಕೆ ಅರವಿಂದಾಕ್ಷನ್ ನಾಯರ್ ಗಿರೀಶ್ ಎ ನಾಯರ್ ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆ ಅಧ್ಯಕ್ಷ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೋಹನನ್ ಕುಟ್ಟಿಯನಂ ಸ್ವಾಗತಿಸಿ, ಕೋಶಾಧಿಕಾರಿ ಶ್ರೀಕುಮಾರ್ ಕೆ.ಪಿ ವಂದಿಸಿದರು.